ಕರ್ನಾಟಕ

karnataka

ETV Bharat / bharat

ರಾಷ್ಟ್ರೀಯ ಶಿಕ್ಷಣ ನೀತಿಗೆ ದೇಶಾದ್ಯಂತ ಉತ್ತಮ ಸ್ಪಂದನೆ; ಬಜೆಟ್​​ ವೇಳೆ ನಿರ್ಮಲಾ ಹೇಳಿಕೆ - Education Policy

2020ರಲ್ಲಿ ಜಾರಿಗೆ ತರಲಾದ ರಾಷ್ಟ್ರೀಯ ಶಿಕ್ಷಣ ನೀತಿಗೆ ದೇಶದಾದ್ಯಂತ ಉತ್ತಮ ಸ್ಪಂದನೆ ದೊರೆಯುತ್ತಿದೆ, ಆದ್ದರಿಂದ ಮುಂದಿನ ದಿನಗಳಲ್ಲಿ 15000ಕ್ಕೂ ಅಧಿಕ ಶಾಲೆಗಳನ್ನು ಈ ನಿಟ್ಟಿನಲ್ಲಿ ಬಲಪಡಿಸಬೇಕಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್​​ ತಮ್ಮ ಇಂದಿನ ಬಜೆಟ್​ ಮಂಡನೆ ವೇಳೆ ಹೇಳಿದ್ದಾರೆ.

File Pic
ಸಂಗ್ರಹ ಚಿತ್ರ

By

Published : Feb 1, 2021, 1:30 PM IST

Updated : Feb 1, 2021, 4:23 PM IST

ನವದೆಹಲಿ: ಕಳೆದ ವರ್ಷ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶಾದ್ಯಂತ ಜಾರಿಗೊಳಿಸಲಾಗಿದ್ದು, ಈ ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಎಲ್ಲೆಡೆ ಉತ್ತಮ ಸ್ಪಂದನೆ ದೊರೆತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಹೇಳಿದ್ದಾರೆ.

ಇಂದು 2021ರ ಬಜೆಟ್​ ಮಂಡನೆಯಲ್ಲಿ ನಿರತರಾಗಿರುವ ವಿತ್ತ ಸಚಿವೆ ಸೀತಾರಾಮನ್​ ಹಲವಾರು ಯೋಜನೆಗಳಿಗೆ ಮೀಸಲಿಡಲಾಗಿರುವ ಮೊತ್ತ ಹಾಗೂ ಪ್ರಮುಖ ಅಂಶಗಳನ್ನು ತಿಳಿಸಿದ್ದಾರೆ. ಈ ವೇಳೆ ಕಳೆದ ವರ್ಷ ಜಾರಿಗೆ ತರಲಾದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ಈ ನೀತಿಯಿಂದಾಗಿ ದೇಶದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ಹಾಗೂ ಪೋಷಕರಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ದೊರೆಯುತ್ತಿದೆ ಎಂದು ಉಲ್ಲೇಖಿಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ ಮುಂಬರುವ ದಿನಗಳಲ್ಲಿ 15,000 ಕ್ಕೂ ಹೆಚ್ಚು ಶಾಲೆಗಳನ್ನು ಗುಣಾತ್ಮಕವಾಗಿ ಅಂದರೆ ಉತ್ತಮ ಶಿಕ್ಷಣ ನೀಡುವ ಶಾಲೆಗಳಾಗಿ ಬಲಪಡಿಸಬೇಕಾಗಿದೆ ಎಂದು ಇದೇ ವೇಳೆ ನಿರ್ಮಲಾ ಸೀತಾರಾಮನ್​ ತಿಳಿಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ ಎಂಬುದು ಭಾರತೀಯರಲ್ಲಿ ಶಿಕ್ಷಣವನ್ನು ಉತ್ತೇಜಿಸಲೆಂದು ಭಾರತ ಸರ್ಕಾರವು ರೂಪಿಸಿದ ಒಂದು ನೀತಿಯಾಗಿದೆ. ಈ ನೀತಿಯು ಗ್ರಾಮೀಣ ಮತ್ತು ನಗರ ಪ್ರದೇಶದ ಕಾಲೇಜು ಮತ್ತು ಪ್ರಾಥಮಿಕ ಶಿಕ್ಷಣವನ್ನು ಒಳಗೊಂಡಿದೆ.

2019 ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಹೊಸ ಶಿಕ್ಷಣ ನೀತಿ 2019 ಕರಡನ್ನು ಬಿಡುಗಡೆ ಮಾಡಿತ್ತು. ತದನಂತರ ಹಲವಾರು ಸಾರ್ವಜನಿಕ ಚರ್ಚೆಗಳ ಬಳಿಕ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ಪರಿಚಯಿಸುವ ಉದ್ದೇಶದಿಂದ 2020 ರ ಜುಲೈ 29 ರಂದು ಕ್ಯಾಬಿನೆಟ್ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಂಗೀಕರಿಸಿತು.

Last Updated : Feb 1, 2021, 4:23 PM IST

ABOUT THE AUTHOR

...view details