ಚೆನ್ನೈ: ರಾಷ್ಟ್ರೀಯ ಪಕ್ಷಗಳ ಮುಂದೆ ಗಟ್ಟಿಯಾಗಿ ನಿಂತುಕೊಳ್ಳಲು ಹರಸಾಹಸ ಪಡುತ್ತಿರುವ ಪ್ರಾದೇಶಿಕ ಪಕ್ಷಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಯುವಕರಿಗೆ ಮಣೆ ಹಾಕುತ್ತಿದ್ದು, ಕರ್ನಾಟಕದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರನ್ನಾಗಿ ಮುಖ್ಯಮಂತ್ರಿಯವರ ಮಗ ನಿಖಿಲ್ ಕುಮಾರಸ್ವಾಮಿಯವರನ್ನ ಆಯ್ಕೆ ಮಾಡಿದೆ.
ಜೆಡಿಎಸ್ ಹಾದಿ ತುಳಿದ ಡಿಎಂಕೆ... ಪಕ್ಷದ ಯೂತ್ ಕಾರ್ಯದರ್ಶಿ ಆಗಿ ಉದಯನಿಧಿ ಆಯ್ಕೆ - ತಮಿಳುನಾಡು
ಪ್ರಾದೇಶಿಕ ಪಕ್ಷಗಳು ಇದೀಗ ಯುವ ಸಮುದಾಯದ ಮೇಲೆ ಕಣ್ಣು ಹಾಕಿದ್ದು, ತಮ್ಮ ಪಕ್ಷದಲ್ಲಿರುವ ವಿವಿಧ ಹುದ್ದೆಗಳಿಗೆ ಯುವಕರಿಗೆ ಮಣೆ ಹಾಕುತ್ತಿವೆ.
ಇದೀಗ ಇದೇ ಹಾದಿಯನ್ನ ತಮಿಳುನಾಡಿನಲ್ಲಿ ವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷ ತುಳಿದಿದೆ. ಎಂಕೆ ಸ್ಟಾಲಿನ್ ಮಗ ಹಾಗೂ ನಟನಾಗಿರುವ ಉದಯನಿಧಿ ಅವರನ್ನ ಪಕ್ಷದ ರಾಜ್ಯ ಘಟಕದ ಯುವಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿದೆ. ಈ ಮಾಹಿತಿಯನ್ನ ಖುದ್ದಾಗಿ ಉದಯನಿಧಿ ತಮ್ಮ ಟ್ವಿಟರ್ನಲ್ಲಿ ಹಾಕಿಕೊಂಡಿದ್ದಾರೆ.
ಈಗಾಗಲೇ ಹಲವು ಚಿತ್ರಗಳಲ್ಲಿ ನಟನೆ ಮಾಡಿ ಅಭಿಮಾನಿ ಬಳಗ ಹೊಂದಿರುವ ಉದಯನಿಧಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಾದ್ಯಂತ ಪ್ರಚಾರ ನಡೆಸಿ, ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. ಇನ್ನು 2021ರಲ್ಲಿ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಈಗಾಗಲೇ ತಯಾರಿ ನಡೆಸಿರುವ ಡಿಎಂಕೆ, ಯುವ ಸಮುದಾಯವನ್ನ ಸೆಳೆಯಲು ಎಂಕೆ ಸ್ಟಾಲಿನ್ ಮಗನಿಗೆ ಮಣೆ ಹಾಕಿದೆ ಎಂದು ತಿಳಿದು ಬಂದಿದೆ.