ವಾಪಿ(ಗುಜರಾತ್): ಕೊರೊನಾ ಸೋಂಕು ನಿವಾರಣೆಗೆ ಔಷಧಿ ಕಂಡುಹಿಡಿಯಲು ಹಲವಾರು ರಾಷ್ಟ್ರಗಳು ಹೆಣಗಾಡುತ್ತಿವೆ. ಈ ಹಿನ್ನೆಲೆ ಕೊರೊನಾ ತಡೆಯಲು ಬಳಸಲಾಗುವ ಔಷಧಿಯನ್ನು ತಯಾರಿಸಲು ಔಷಧ ತಯಾರಿಕಾ ಕಂಪನಿಗಳಿಗೆ ಈಗ ಅನುಮತಿ ನೀಡಲಾಗಿದೆ.
ಕೊರೊನಾ ಔಷದಕ್ಕೆ ಭಾರೀ ಬೇಡಿಕೆ ಈ ಕಂಪನಿಗಳಿಗೆ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಲಾಗಿದ್ದು, ಜೀವ ಉಳಿಸುವ ಔಷಧಿಗಳನ್ನು ತಯಾರು ಮಾಡಲು ಸೂಚಿಸಲಾಗಿದೆ. ಮಾರಣಾಂತಿಕ ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡಲು ಈ ಡ್ರಗ್ಸ್ ಸಹಾಯಕವಾಗಿದೆ ಎಂದು ತಿಳಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ನಿಷೇಧಿಸಿದ್ದರು. ಔಷಧಿಯ ರಫ್ತಿನ ಮೇಲಿನ ನಿಷೇಧ ತೆಗೆದುಹಾಕುವಂತೆ ಅಮೆರಿಕ ಮತ್ತು ಬ್ರೆಜಿಲ್ ಭಾರತವನ್ನು ವಿನಂತಿಸಿದ್ದವು.
ಕೊರೊನಾ ಔಷಧಕ್ಕೆ ವಿಶ್ವದೆಲ್ಲೆಡೆ ಭಾರಿ ಬೇಡಿಕೆ: ಲಾಕ್‌ಡೌನ್‌ನಿಂದ ಕಂಪನಿಗಳಿಗೆ ವಿನಾಯಿತಿ ಭಾರತ ಕೂಡ ಅಮೆರಿಕದ ಮನವಿ ಮೇರೆಗೆ ಈ ಔಷಧ ರಪ್ತು ಮಾಡಲು ಒಪ್ಪಿಕೊಂಡಿದ್ದು, ಈ ಔಷಧವನ್ನು ತಯಾರು ಮಾಡಲು ವಾಪಿ ಮೂಲದ ವೈಟಲ್ ಮತ್ತು ಮಂಗಳಂ ಎಂಬ ಎರಡು ಔಷಧೀಯ ಕಂಪನಿಗಳು ಪ್ರತಿ ತಿಂಗಳು ನಾಲ್ಕರಿಂದ ಐದು ಟನ್ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಉತ್ಪಾದಿಸಲು ಮುಂದಾಗಿವೆ.
ಕೊರೊನಾ ಔಷದಕ್ಕೆ ಭಾರೀ ಬೇಡಿಕೆ ವೈಟಲ್ ಕಂಪನಿಯ ಶಂಕರ್ ಬಜಾಜ್, ನಮ್ಮ ಕಂಪನಿಯೊಂದಿಗೆ ಮಂಗಳಂ ಎಂಬ ಮತ್ತೊಂದು ಕಂಪನಿಯನ್ನು ಸೇರಿಸಿಕೊಂಡು ಕಳೆದ ಹಲವು ವರ್ಷಗಳಿಂದ ಈ ಔಷಧಿಯನ್ನು ತಯಾರಿಸುತ್ತಿದ್ದೇವೆ ಎಂದು ತಿಳಿಸಿದರು. ಇಂದಿಗೂ ಕಂಪನಿಯು ನಾಲ್ಕೈದು ಟನ್‌ಗಳಷ್ಟು ಔಷಧಿಯನ್ನು ಉತ್ಪಾದನೆ ಮಾಡುತ್ತಿದೆ.
ಈ ಔಷಧವು ಭಾರತದಲ್ಲಿ ದೊಡ್ಡ ಮಾರುಕಟ್ಟೆಯನ್ನು ಹೊಂದಿದೆ. ಮಲೇರಿಯಾ, ಆಮ್ಲೀಯತೆ ಮತ್ತು ಇತರ ಕಿಬ್ಬೊಟ್ಟೆಯ ಚಿಕಿತ್ಸೆಗಾಗಿ ಇದನ್ನು ಬಳಸಲಾಗುತ್ತದೆ.