ಕರ್ನಾಟಕ

karnataka

ETV Bharat / bharat

ಮಹಿಳೆಯರು ಸ್ನಾನ ಮಾಡುತ್ತಿದ್ದನ್ನು ಕದ್ದು ನೋಡುತ್ತಿದ್ದರು ಸೆಲೂನ್​ ಬಾಯ್ಸ್​​​! - ಹೈದರಾಬಾದ್​ ಮಹಿಳೆಯರು ಸ್ನಾನ ಮಾಡುತ್ತಿದ್ದನ್ನು ಕದ್ದು ನೋಡುತ್ತಿದ್ದ ಸೆಲೂನ್​ ಬಾಯ್ಸ್

ಸೆಲೂನ್​ ಮಾಲೀಕ ಮತ್ತು ಕೆಲಸಗಾರ ಮಹಿಳೆಯರು ಸ್ನಾನ ಮಾಡುತ್ತಿರುವುದನ್ನು ಕಿಟಕಿಗಳ ಮೂಲಕ ಕದ್ದು ನೋಡುತ್ತಿದ್ದ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ

By

Published : Sep 1, 2019, 7:40 PM IST

ಹೈದರಾಬಾದ್​:ಸೆಲೂನ್​ ಮಾಲೀಕ ತನ್ನ ಕೆಲಸಗಾರನ ಜೊತೆಗೂಡಿ ಮಹಿಳೆಯರು ಸ್ನಾನ ಮಾಡುತ್ತಿರುವುದನ್ನು ಕಿಟಕಿಗಳ ಮೂಲಕ ಕದ್ದು ನೋಡುತ್ತಿರುವ ಘಟನೆ ಇಲ್ಲಿನ ಜರ್ನಲಿಸ್ಟ್​ ಕಾಲೋನಿಯಲ್ಲಿ ನಡೆದಿದೆ.

ಶಿಲ್ಪಾ ಹೇರ್​ ಕಟಿಂಗ್​ ಸೆಲೂನ್​ ಮಾಲೀಕ ಜಂಗಯ್ಯ (40) ಮತ್ತು ಕೆಲಗಾರ ಮಂಜುನಾಥ್​ (30) ಕೆಲ ದಿನಗಳಿಂದಲೂ ಈ ದುಷ್ಟಚಟಕ್ಕೆ ಬಿದ್ದಿದ್ದಾರೆ. ಶಾಪ್​ ಪಕ್ಕದಲ್ಲಿರುವ ಮನೆಗಳೇ ಇವರ ಟಾರ್ಗೆಟ್​ ಆಗಿತ್ತು. ಮಹಿಳೆಯರು ಸ್ನಾನ ಮಾಡಲು ಬಾತ್​ರೂಂಗೆ ತೆರಳಿದ್ದಾಗ ಇವರು ಕಿಟಕಿ ಮೂಲಕ ಕದ್ದು ನೋಡುತ್ತಿದ್ದರು.

ಕೆಲ ಮನೆಗಳ ಹೊರ ಭಾಗದಲ್ಲಿ ಅಳವಡಿಸಿದ್ದ ಸಿಸಿಟಿವಿಗಳನ್ನು ಧ್ವಂಸ ಮಾಡಿದ್ದಾರೆ. ಇನ್ನು ಮಹಿಳೆಯೊಬ್ಬಳು ಇವರ ಮೇಲೆ ದೂರು ನೀಡಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು, ಐಪಿಸಿ ಸೆಕ್ಷನ್​ 354 (ಸಿ), 427, 509 ಕಲಂಗಳಡಿ ಕೇಸ್​ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details