ಹೈದರಾಬಾದ್: ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಬಗ್ಗೆ ಚೀನಾ-ಅಮೆರಿಕನ್ ವರದಿಗಾರ್ತಿಯ ಪ್ರಶ್ನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗರಂ ಆಗಿದ್ದು, ಈ ಪ್ರಶ್ನೆಯನ್ನು ಚೀನಾಗೆ ಕೇಳಬೇಕು ಎಂದಿದ್ದಾರೆ.
ಈ ಪ್ರಶ್ನೆಯನ್ನು ಚೀನಾದವರಿಗೆ ಕೇಳಿ ಎಂದ ಡೊನಾಲ್ಡ್ ಟ್ರಂಪ್, ಏನದು?
ಕೊರೊನಾ ಪರೀಕ್ಷೆಯ ವಿಷಯಕ್ಕೆ ಬಂದಾಗ ಅಮೆರಿಕ ಇತರ ದೇಶಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಟ್ರಂಪ್ ಪ್ರತಿಪಾದನೆಯನ್ನು ಪ್ರಶ್ನಿಸಿದ ವರದಿಗಾರ್ತಿ, ಸಾವಿರಾರು ಸಾವುಗಳು ಅಮೆರಿಕದಲ್ಲಿಯೇ ಸಂಭವಿಸುತ್ತಿವೆಯಲ್ಲಾ? ಎಂದು ಕೇಳಿದ್ದಾರೆ. ಇದಕ್ಕೆ ಈ ಪ್ರಶ್ನೆಯನ್ನು ಚೀನಾದವರ ಬಳಿಯೇ ಕೇಳಬೇಕು ಎಂದು ಟ್ರಂಪ್ ತಿಳಿಸಿದರು.
ಟ್ರಂಪ್
ಕೊರೊನಾ ಪ್ರಕರಣ ಅಮೆರಿಕದಲ್ಲಿ ಏಕೆ ಹೆಚ್ಚಳವಾಗುತ್ತಿದೆ?. ಅಮೆರಿಕನ್ನರು ಇಂದಿಗೂ ಕೂಡ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಪ್ರತಿದಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಯಾಕೆ ಜಾಗತಿಕ ಸ್ಫರ್ಧೆಯಾಗಿ ಗೋಚರಿಸುತ್ತಿದೆ? ಎಂದು ಸಿಬಿಎಸ್ ನ್ಯೂಸ್ ವರದಿಗಾರ್ತಿ ವೀಜಿಯಾ ಜಿಯಾಂಗ್ ಅಮೆರಿಕಾಧ್ಯಕ್ಷರನ್ನು ಕೇಳಿದ್ದಾರೆ.
ಇದಕ್ಕೆ ಉತ್ತರಿಸಿದ ಟ್ರಂಪ್, ಜಗತ್ತಿನೆಲ್ಲೆಡೆ ಜನರು ಕೊರೊನಾಗೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ನೀವು ಈ ಪ್ರಶ್ನೆಯನ್ನು ಚೀನಾದವರ ಬಳಿ ಕೇಳಬೇಕು, ನನ್ನನ್ನು ಕೇಳಬೇಡಿ ಎಂದು ಚೀನಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.