ಹೈದರಾಬಾದ್: ತಮ್ಮ 26ನೇ ವಯಸ್ಸಿಗೆ ಅರ್ಜೆಂಟೀನಾಗೆ ಫಿಫಾ ವಿಶ್ವಕಪ್ ತಂದುಕೊಟ್ಟಿದ್ದ ಫುಟ್‌ಬಾಲ್ ದಂತಕಥೆ ಡಿಯಾಗೋ ಅರ್ಮಾಂಡೋ ಮರಡೋನಾ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಮರಡೋನಾ ಅವರ ಜೀವನ ಪಯಣ ಹೀಗಿದೆ..
- 1960: ಅರ್ಜೆಂಟೀನಾದ ಲಾನಸ್‌ನಲ್ಲಿ ಅಕ್ಟೋಬರ್ 30 ರಂದು ಜನನ
- 1970: ಲಾಸ್ ಸೆಬೊಲಿಟಾಸ್ನ ಫುಟ್ಬಾಲ್ ಯುವ ತಂಡಕ್ಕೆ ಸೇರ್ಪಡೆ
- 1971: 11ನೇ ವಯಸ್ಸಿಗೆ ಅರ್ಜೆಂಟಿನೋಸ್ ಜೂನಿಯರ್ಸ್ ತಂಡಕ್ಕೆ ಆಯ್ಕೆ
- 1976: ಅರ್ಜೆಂಟಿನೋಸ್ ಜೂನಿಯರ್ಸ್ ತಂಡದಿಂದ ಮೊದಲ ಪಂದ್ಯ ಆಡಿ ಫುಟ್ಬಾಲ್ ವೃತ್ತಿಜೀವನ ಆರಂಭ
- 1977: 16ನೇ ವರ್ಷಕ್ಕೆ ಮೊದಲ ಅಂತಾರಾಷ್ಟ್ರೀಯ ಪಂದ್ಯ
- 1978: ಅರ್ಜೆಂಟೀನಾದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮರಡೋನಾ
- 1979: ಮೊದಲ ಅಂತಾರಾಷ್ಟ್ರೀಯ ಗೋಲ್ ಗಳಿಕೆ, ಜೂನಿಯರ್ ವರ್ಲ್ಡ್ ಕಪ್ ಗೆದ್ದ ಡಿಯಾಗೋ
- 1980: ಸ್ಪ್ಯಾನಿಷ್ ಲೀಗ್ಗೆ ಸಹಿ
- 1982: ಅರ್ಜೆಂಟೀನಾ ಪರ ಮೊದಲ ವಿಶ್ವಕಪ್ ಆಟ
- 1983: ಸ್ಪ್ಯಾನಿಷ್ ಕಪ್ ಗೆಲ್ಲಲು ಸಹಾಯ
- 1986: ನಾಯಕನಾಗಿ ಅರ್ಜೆಂಟೀನಾ ಪರ ವಿಶ್ವಕಪ್ ಗೆದ್ದ ಮರಡೋನಾ ( 'ಹ್ಯಾಂಡ್ ಆಫ್ ಗಾಡ್' ಗೋಲು ಸೇರಿ ಇಂಗ್ಲೆಂಡ್ ವಿರುದ್ಧ ಎರಡು ಗೋಲುಗಳನ್ನು ಗಳಿಸಿ ದಾಖಲೆ. ಇದನ್ನು 2002 ರಲ್ಲಿ ನಡೆದ ಫಿಫಾ ಸಮೀಕ್ಷೆಯಲ್ಲಿ 'ಗೋಲ್ ಆಫ್ ದಿ ಸೆಂಚುರಿ' ಎಂದು ಆಯ್ಕೆ ಮಾಡಲಾಗಿತ್ತು)
- 1989: ಕ್ಲೌಡಿಯಾ ವಿಲ್ಲಾಫೇನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮರಡೋನಾ
- 1990: ವಿಶ್ವಕಪ್ ಫೈನಲ್‌ನಲ್ಲಿ ಜರ್ಮನಿ ವಿರುದ್ಧ ಸೋಲು
- 1991: ಪಂದ್ಯವೊಂದರ ವೇಳೆ ಡ್ರಗ್ (ಕೊಕೇನ್) ಸೇವನೆ ಸಾಬೀತು - 15 ತಿಂಗಳ ಕಾಲ ಅಮಾನತು