ಮುಂಬೈ:ಮನೆ ಬಾಗಿಲಿನಲ್ಲಿ ಆಟವಾಡುತ್ತಿದ್ದ ಪುಟ್ಟ ಮಗುವಿನ ಮೇಲೆ ಕಾರೊಂದು ಹರಿದು ಹೋಗಿದ್ದು, ಅದೃಷ್ಟವಶಾತ್ ರೀತಿಯಲ್ಲಿ ಆ ಮಗು ಬದುಕುಳಿದಿರುವ ಘಟನೆ ನಡೆದಿದೆ.
ಮೂರು ವರ್ಷದ ಮಗುವಿನ ಮೇಲೆ ಹರಿದ ಕಾರು... ಎದೆ ಝಲ್ ಎನ್ನುವ ವಿಡಿಯೋ! - ಸಿಸಿಟಿವಿಯಲ್ಲಿ ದೃಶ್ಯಾವಳಿ
ಮೂರು ವರ್ಷದ ಮಗುವಿನ ಮೇಲೆ ಕಾರೊಂದು ಹರಿದು ಹೋಗಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದ್ದು, ಅದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಹಾರಾಷ್ಟ್ರದ ಮುಂಬೈನ ಮಲ್ವಾನಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮನೆಯ ಹೊರಗಡೆ ಮೂರು ವರ್ಷದ ಮಗು ಆಟವಾಡುತ್ತಿತ್ತು. ಈ ವೇಳೆ ಅದೇ ರಸ್ತೆಯಲ್ಲಿ ಬಂದ ಕಾರು ಮಗುವಿಗೆ ಡಿಕ್ಕಿ ಹೊಡೆದಿದೆ. ಕೆಳಕ್ಕೆ ಬಿದ್ದ ಮಗುವಿನ ಮೇಲೆ ಕಾರಿನ ಎರಡು ಚಕ್ರಗಳು ಹಾಯ್ದು ಹೋಗಿವೆ. ಇದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ.
ಸೆಪ್ಟೆಂಬರ್ 11ರಂದು ಮಧ್ಯಾಹ್ನ 2 ಗಂಟೆಗೆ ಈ ಘಟನೆ ನಡೆದಿದೆ. ಚಿಕಿತ್ಸೆ ಪಡೆದುಕೊಂಡಿರುವ ಮಗು ಈಗಾಗಲೇ ಡಿಸ್ಚಾರ್ಜ್ ಆಗಿದೆ. ಕಾರು ಚಾಲಕನ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.