ನೋಯ್ಡಾ: ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ 135 ಏರಿಯಾದಲ್ಲಿ ಮೂವರು ಮಹಿಳೆಯರ ಮೇಲೆ ಅತ್ಯಾಚಾರ ಎಸೆಗಿರುವ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯ ಬಂಧನ ಮಾಡಲಾಗಿದೆ.
ಆರೋಪಿಗಳನ್ನ ಅಖಿಲೇಶ್ ಯಾದವ್,ಲವೇಶ್ ಯಾದವ್, ಭೋಲಾ ಯಾದವ್, ಅಂಜು ಯಾದವ್, ರಾಜೇಶ್ ಯಾದವ್, ಸತೀಸ್ ಪಾಲ್ ಹಾಗೂ ರಾಜಕುಮಾರ್ ಮೌರ್ಯ ಎಂದು ಗುರುತಿಸಲಾಗಿದ್ದು, ತಪ್ಪಿಸಿಕೊಂಡಿರುವ ಇಬ್ಬರನ್ನ ಮುಲಾಯಂ ಯಾದವ್ ಹಾಗೂ ಪಂಕಜ್ ಎಂದು ಗುರುತಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ನಿನ್ನೆ ಸಂಜೆ 5ಗಂಟೆಗೆ ಎಕ್ಸ್ಪ್ರೆಸ್ ವೇ ರೈಲ್ವೆ ಸ್ಟೇಷನ್ಗೆ ಆಗಮಿಸಿ, ಮಹಿಳೆ ದೂರು ನೀಡಿದ್ದು, ತನ್ನೊಂದಿಗೆ ಇದ್ದ ಇಬ್ಬರು ಸ್ನೇಹಿತೆಯರ ಮೇಲೂ ದುಷ್ಕರ್ಮಿಗಳು ಕೃತ್ಯವೆಸಗಿದ್ದಾಗಿ ತಿಳಿಸಿದ್ದಾಳೆ. ಇನ್ನು ಪೊಲೀಸರು ತಿಳಿಸಿರುವ ಪ್ರಕಾರ ಅತ್ಯಾಚಾರಕ್ಕೊಳಗಾದ ಮಹಿಳೆಯರು ಲೈಂಗಿಕ ಕಾರ್ಯಕರ್ತೆಯರು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ವ್ಯಕ್ತಿವೋರ್ವ ಇವರನ್ನ ಫಾರ್ಮ್ ಹೌಸ್ಗೆ ಕರೆತಂದಿದ್ದು, ಅಲ್ಲಿ ಕಾಮುಕರು ದುಷ್ಕೃತ್ಯವೆಸಗಿದ್ದಾರೆ. ತದನಂತರ ಅವರನ್ನ ರಸ್ತೆ ಪಕ್ಕದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ವೈಭವ್ ಕೃಷ್ಣ ತಿಳಿಸಿದ್ದಾರೆ.