ಕರ್ನಾಟಕ

karnataka

ETV Bharat / bharat

ಅತ್ಯಾಚಾರದ ವಿಡಿಯೋ ವೈರಲ್ ; ಅಪ್ರಾಪ್ತ ಬಾಲಕ ಸೇರಿ ಮೂವರು ಅರೆಸ್ಟ್​

ವಿಡಿಯೋ ವೈರಲ್​ ಆಗಿದ್ದು ಮಹಿಳೆ ನೀಡಿದ ದೂರಿನಂತೆ ಇದೀಗ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್​ಪಿ ರಾಮಮೂರ್ತಿ ಜೋಶಿ ಮಾಹಿತಿ ನೀಡಿದ್ದಾರೆ. ಧುತಾ ಅಲಿಯಾಸ್ ಅಸಮ್, ವಾರೀಶ್ ಮತ್ತು ಸಾಹುದ್ ಬಂಧಿತ ಆರೋಪಿಗಳೆಂದು ತಿಳಿದು ಬಂದಿದೆ..

Alwar: Three accused arrested in rape video viral case
ಸಂಗ್ರಹ ಚಿತ್ರ

By

Published : Sep 19, 2020, 7:48 PM IST

ರಾಜಸ್ಥಾನ :ಅತ್ಯಾಚಾಗೈದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಪ್ರಕರಣ ಸಂಬಂಧ ಮುಖ್ಯ ಆರೋಪಿ ಸೇರಿ ಒಟ್ಟು ಮೂವರನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಓರ್ವ ಅಪ್ರಾಪ್ತ ಬಾಲಕನಿದ್ದಾನೆ.

ತನ್ನ ಸಹೋದರನಿಗೆ ಹಣ ನೀಡಿ ಸಂಬಂಧಿಯೊಂದಿಗೆ ಹಿಂದಿರುಗುತ್ತಿದ್ದ ಮಹಿಳೆಯನ್ನು ಸುತ್ತುವರೆದ ಕಾಮುಕರ ಗುಂಪು ಅವಳ ಮೇಳೆ ಅತ್ಯಾಚಾರಕ್ಕಿಳಿದಿತ್ತು. ಈ ವೇಳೆ ತಡೆಯಲು ಬಂದ ಆಕೆಯ ಜೊತೆಗಿದ್ದ ಸಂಬಂಧಿಯನ್ನು ಕೂಡಿ ಹಾಕಿ ಮಹಿಳೆಯ ಮಾನಭಂಗ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಅತ್ಯಾಚಾರ ಮಾಡುತ್ತಿದ್ದ ದೃಶ್ಯ ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದರು. ವಿಷಯವನ್ನು ಯಾರಿಗೂ ಹೇಳದಂತೆ ಬೆದರಿಕೆ ಸಹ ಹಾಕಿದ್ದರು.

ಆದರೆ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಸಂತ್ರಸ್ತೆ ಇಲ್ಲಿನ ಟಿಜಾರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಳು. ದೂರು ದಾಖಲಿಸಿಕೊಂಡ ಪೊಲೀಸರು ಅತ್ಯಾಚಾರಗೈದ ಮುಖ್ಯ ಆರೋಪಿ ಸೇರಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ವೈರಲ್​ ಮಾಡಿದ ಓರ್ವ ಅಪ್ರಾಪ್ತನನ್ನೂ ಒಳಗೊಂಡಂತೆ ಒಟ್ಟು ಮೂವರನ್ನು ಬಂಧಿಸಿದ್ದಾರೆ.

ವಿಡಿಯೋ ವೈರಲ್ ಆದ ನಂತರ ಸಂತ್ರಸ್ತೆಯು ಸೆ. 17ರಂದು ಟಿಜಾರಾ ಪೊಲೀಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಿದ್ದಳು. ಸೆ. 14ರಂದು ತನ್ನ ಸಹೋದರನಿಗೆ ಹಣ ನೀಡಿ ಹಿಂದಿರುಗುತ್ತಿದ್ದಾಗ 6-7 ಜನರ ಗುಂಪಿನಲ್ಲಿದ್ದ ಓರ್ವ ವ್ಯಕ್ತಿ ತನ್ನ ಮಾನಭಂಗ ಮಾಡಿದ್ದಾನೆ ಎಂದು ಸಂತ್ರಸ್ತೆ ಮಹಿಳೆಯೂ ಎಫ್‌ಐಆರ್‌ನಲ್ಲಿ ದಾಖಲಿಸಿದ್ದಳು. ಅದರಂತೆ ಇದೀಗ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

45 ವರ್ಷದ ವಿವಾಹಿತ ಮಹಿಳೆಯು ಸೆ. 14ರಂದು ತನ್ನ ಸಹೋದರನಿಗೆ 10,000 ರೂ. ಪಾವತಿಸಿ ಸೋದರಳಿಯನೊಂದಿಗೆ ಬೈಕ್​ನಲ್ಲಿ ತೆರಳುತ್ತಿದ್ದಳು. ಈ ವೇಳೆ ದಾರಿಯಲ್ಲಿ ಟಿಜಾರಾ ಪೊಲೀಸ್ ಠಾಣೆ ಪ್ರದೇಶದ ವ್ಯಾಪ್ತಿಯ ಬೆಟ್ಟದ ಬಳಿ ಕೊಡಲಿ ಮತ್ತು ಇತರೆ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ 6 ಜನರಿದ್ದ ಗುಂಪು ಇವರನ್ನು ತಡೆದಿದ್ದಲ್ಲದೇ ಆಕೆಯ ಸೋದರಳಿಯನ ಮೇಲೆ ಹಲ್ಲೆ ನಡೆಸಿದೆ. ನಂತರ, ಅವನು ಆ ವ್ಯಕ್ತಿಯ ಕೈ ಮತ್ತು ಕಾಲುಗಳನ್ನು ಕಟ್ಟಿ ಕೂಡಿ ಹಾಕಿ ಮಹಿಳೆಯೊಂದಿಗೆ ಅಶ್ಲೀಲತೆಯಿಂದ ನಡೆದುಕೊಂಡಿದ್ದಾರೆ.

ವಿಡಿಯೋ ವೈರಲ್​ ಆಗಿದ್ದು ಮಹಿಳೆ ನೀಡಿದ ದೂರಿನಂತೆ ಇದೀಗ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್​ಪಿ ರಾಮಮೂರ್ತಿ ಜೋಶಿ ಮಾಹಿತಿ ನೀಡಿದ್ದಾರೆ. ಧುತಾ ಅಲಿಯಾಸ್ ಅಸಮ್, ವಾರೀಶ್ ಮತ್ತು ಸಾಹುದ್ ಬಂಧಿತ ಆರೋಪಿಗಳೆಂದು ತಿಳಿದು ಬಂದಿದೆ. ವಿಡಿಯೋ ವೈರಲ್ ಮಾಡದಂತೆ ಎಸ್‌ಪಿ ರಾಮಮೂರ್ತಿ ಜೋಶಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ABOUT THE AUTHOR

...view details