ಸೂರತ್:ರಕ್ಷಾ ಬಂಧನ ಎಂಬ ಪವಿತ್ರ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಹಬ್ಬದ ಸಂಭ್ರಮ ಕಳೆಗುಂದಿದೆ. ಆದರೆ, ಸಂಕಷ್ಟದ ಸಮಯವನ್ನು ಅವಕಾಶವಾಗಿಸಿಕೊಂಡ ಡಿಸೈನರ್ ಒಬ್ಬರು ತಯಾರಿಸಿದ ರಾಖಿಯಲ್ಲಿ ಸ್ಯಾನಿಟೈಸರ್ ಹಾಗೂ ಮಾಸ್ಕ್ ಎರಡೂ ಇವೆ.
ಸ್ಯಾನಿಟೈಸರ್, ಮಾಸ್ಕ್ ಹೊಂದಿದ ರಾಖಿ ತಯಾರಿ: ಇದು ಈ ಡಿಸೈನರ್ ಕೈಚಳಕ
ಸೂರತ್ನ ಡಿಸೈನರ್ ಬಿನ್ನಿ ಅವರು ವಿನೂತನ ರಾಖಿ ತಯಾರಿಸಿದ್ದು, ಇದರಲ್ಲಿ ಸ್ಯಾನಿಟೈಸರ್ ಹಾಗೂ ಮಾಸ್ಕ್ ಎರಡೂ ಇವೆ.
ಸೂರತ್ನ ಡಿಸೈನರ್ ಬಿನ್ನಿ ಅವರು ಈ ವಿಶಿಷ್ಟ ರಾಖಿ ಪರಿಚಯಿಸಿದ್ದಾರೆ. ಇದರಲ್ಲಿ ಪಾಕೆಟ್ ಗಾತ್ರದ ಸ್ಯಾನಿಟೈಸರ್ ಬಾಟಲ್ ಮತ್ತು ಅಲಂಕೃತ ಹೂವು ಮತ್ತು ಚಿಟ್ಟೆಯಂತೆ ಮುಖವಾಡವನ್ನು ಜೋಡಿಸಲಾಗಿದೆ. ಈ ಕುರಿತು ಮಾತನಾಡಿದ ಅವರು, ಕೊರೊನಾ ವೈರಸ್ ವಿರುದ್ಧ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಸಂದೇಶವನ್ನು ತಲುಪಿಸುವ ಸಲುವಾಗಿ ಈ ರಾಖಿಯನ್ನು ವಿನ್ಯಾಸಗೊಳಿಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಈ ಪಾಕೆಟ್ ಗಾತ್ರದ ಬಾಟಲಿ ಸ್ಯಾನಿಟೈಸರ್ ಎರಡು ದಿನಗಳವರೆಗೆ ಇರುತ್ತದೆ ಮತ್ತು ಇದರ ಬೆಲೆ 30 ರೂ. ಎಂದು ಡಿಸೈನರ್ ಬಿನ್ನಿ ತಿಳಿಸಿದ್ದಾರೆ.