ನವದೆಹಲಿ:ನಾಳೆ ರಾಜಧಾನಿ ನವದೆಹಲಿಯಲ್ಲಿ 6ನೇ ಹಂತದ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ದೆಹಲಿಯ 7 ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 164 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಅದರಲ್ಲಿನ 10 ಅಭ್ಯರ್ಥಿಗಳು ತಮಗೆ ತಾವು ವೋಟು ಹಾಕಲಾಗದ ಪರಿಸ್ಥಿತಿಯಲ್ಲಿದ್ದಾರೆ.
ಹೌದು, ದೆಹಲಿಯಲ್ಲಿ ಸ್ಪರ್ಧಿಸುತ್ತಿರುವ ಲೋಕಸಭಾ ಕ್ಷೇತ್ರಗಳಲ್ಲಿ ಸುಮಾರು 10 ಅಭ್ಯರ್ಥಿಗಳು ತಾವು ನಿಂತ ಕ್ಷೇತ್ರದಲ್ಲಿ ಮತದಾನ ಮಾಡಲು ಸಾಧ್ಯವಾಗುವುದಿಲ್ಲ. ಇದರಲ್ಲಿ ಕಾಂಗ್ರಸ್, ಬಿಜೆಪಿ, ಆಮ್ ಆದ್ಮಿ ಪಕ್ಷದವರೂ ಇದ್ದಾರೆ. ಆ 21 ಅಭ್ಯರ್ಥಿಗಳಲ್ಲಿ ಒಟ್ಟು 10 ಅಭ್ಯರ್ಥಿಗಳು ತಮಗೆ ತಾವು ವೋಟ್ ಹಾಕಲು ಸಾಧ್ಯವಾಗಲ್ಲ. ಏಕೆಂದರೆ ಅವರು ಆ ಕ್ಷೇತ್ರದ ಮತದಾರರಲ್ಲ.
ಗೌತಮ್ ಗಂಭೀರ್:
ಗೌತಮ್ ಗಂಭೀರ್ ಪೂರ್ವ ದೆಹಲಿಯಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ, ಅವರ ಮತದಾನದ ಹಕ್ಕು ಇರುವುದು ನವದೆಹಲಿ ಇನ್ನೊಂದು ಕ್ಷೇತ್ರದಲ್ಲಿ. ತಮಗೆ ತಾವು ಮತ ಹಾಕಿಕೊಳ್ಳಲು ಆಗುವುದಿಲ್ಲ. ಆದರೆ ಇವರು ನಾಳೆ ತಮ್ಮ ಹಕ್ಕು ಚಲಾವಣೆ ಮಾಡಲಿದ್ದಾರೆ.
ಆತಿಶಿ: