ನವದೆಹಲಿ: ಅಮೆರಿಕದಲ್ಲಿ ಕ್ಯಾಪಿಟಲ್ ಹಿಲ್ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯಿಸಿ ಮತ್ತು ರೈತರ ಪ್ರತಿಭಟನೆಯ ಬಗ್ಗೆ ಮೌನ ಕಾಪಾಡಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಮೂಲ ವಿಷಯಗಳ ಬಗ್ಗೆ ತಿಳಿವಳಿಕೆ ಕಡಿಮೆ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.
'ಇಸ್ ಬಾರ್ ಟ್ರಂಪ್ ಸರ್ಕಾರ್' ಎಂದು ಪ್ರಧಾನಿ ಅಂದು ಹೇಳಿದ್ದನ್ನು ನೆನಪಿಸಿಕೊಳ್ಳಲು ಇಚ್ಚಿಸುತ್ತೇನೆ. ದೇಶದ ಪ್ರಧಾನಿಯಾಗಿದ್ದುಕೊಂಡು ನೀವು ಆ ಹೇಳಿಕೆ ಕೊಡಬಾರದಿತ್ತು. ಆ ಹೇಳಿಕೆ ಅಮೆರಿಕನ್ನರ ಗೌರವಕ್ಕೆ ಚ್ಯುತಿ ತಂದತ್ತಾಗುತ್ತದೆ. ತಮ್ಮ ದೇಶದ ಅಧ್ಯಕ್ಷನ ಆಯ್ಕೆಯು ಅಮೆರಿಕನ್ನರಿಗೆ ಬಿಟ್ಟ ವಿಚಾರ, ಅದು ಅವರ ಆಯ್ಕೆ, ನಿಮ್ಮದಲ್ಲ. ಈ ರೀತಿಯ ಹೇಳಿಕೆ ನೀಡಿರುವುದನ್ನು ಗಮನಿಸಿದರೆ ತಿಳಿಯುತ್ತದೆ, ನಿಮಗೆ ಮೂಲ ವಿಷಯಗಳ ಬಗ್ಗೆ ತಿಳಿವಳಿಕೆ ಕಡಿಮೆ ಇದೆ ಎಂದು ಟೀಕಿಸಿದ್ದಾರೆ. ಇದೀಗ ಟ್ರಂಪ್ ಸೋತಿದ್ದಾರೆ ಎಂದು ಕ್ಯಾಪಿಟಲ್ ಹಿಲ್ ಹಿಂಸಾಚಾರ ಮತ್ತು ರೈತರ ಪ್ರತಿಭಟನೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.