ಕರ್ನಾಟಕ

karnataka

ETV Bharat / bharat

ಎರಡು ತಲೆಯ ಕರುವಿಗೆ ಜನ್ಮ ನೀಡಿದ ಹಸು - cow calf with two heads

ಹಸುವೊಂದು ಎರಡು ತಲೆಯ ಕರುವಿಗೆ ಜನ್ಮ ನೀಡಿದ್ದು, ಇದನ್ನು ನೋಡಲು ಸ್ಥಳೀಯರು ಮುಗಿಬೀಳುತ್ತಿದ್ದಾರೆ.

The calf born with a double head
ಎರಡು ತಲೆಯ ಕರುವಿಗೆ ಜನ್ಮ ನೀಡಿದ ಹಸು

By

Published : Sep 8, 2020, 5:27 PM IST

ಕೋಯಿಕ್ಕೋಡ್:ಕೇರಳದ ಕೋಯಿಕ್ಕೋಡ್​ನ ಪಲೇರಿಯ ತಾರಿಪ್ಪಿಲೊಟ್ಟಿ ಗ್ರಾಮದಲ್ಲಿ ಟಿ.ಪಿ.ಪ್ರೇಮಚಂದ್ರನ್ ಎಂಬವರ ಮನೆಯ ಹಸುವೊಂದು ಎರಡು ತಲೆಯ ಕರುವಿಗೆ ಜನ್ಮ ನೀಡಿದೆ.

ವಿಚಿತ್ರ ರೂಪದ ಕರುವನ್ನು ನೋಡಲು ಸ್ಥಳೀಯರು ಮುಗಿಬೀಳುತ್ತಿದ್ದಾರೆ. ಎರಡು ತಲೆಗಳಿರುವ ಕರುವಿಗೆ ನಾಲ್ಕು ಕಣ್ಣುಗಳು, ಎರಡು ಮೂಗು ಹಾಗೂ ಎರಡು ಬಾಯಿಯಿದೆ.

ಕರು ತನ್ನ ತಲೆಯ ತೂಕದಿಂದಾಗಿ ಎದ್ದು ನಿಲ್ಲಲು ಸಾಧ್ಯವಾಗುತ್ತಿಲ್ಲ. ಎರಡೂ ಬಾಯಿಯ ಮೂಲಕ ಕರುವಿಗೆ ಹಾಲುಣಿಸಲಾಗುತ್ತಿದೆ. ಪಶುವೈದ್ಯರು ಸ್ಥಳಕ್ಕೆ ತಲುಪಿ ಹಸು ಮತ್ತು ಕರುವನ್ನು ಪರಿಶೀಲಿಸಿದ್ದಾರೆ.

ಇನ್ನು ಹೈಬ್ರಿಡ್​ ತಳಿಯ ಹಸು ಇದಾಗಿದ್ದು, ಖಾಸಗಿ ಗರ್ಭಧಾರಣೆಯ ಕೇಂದ್ರದಿಂದ ಲಸಿಕೆ ಹಾಕಿಸಲಾಗಿತ್ತು.

ABOUT THE AUTHOR

...view details