ಕರ್ನಾಟಕ

karnataka

ETV Bharat / bharat

ಕೇವಲ 20 ದಿನಗಳಲ್ಲಿ ಸಿದ್ದವಾಯ್ತು 14 ಅಂತಸ್ತಿನ ಕೊರೊನಾ ಆಸ್ಪತ್ರೆ..!

ತೆಲಂಗಾಣ ಸರ್ಕಾರವು ಕೇವಲ 20 ದಿನಗಳ ಅಂತರದಲ್ಲಿ ಗಚಿಬೌಲಿ ಕ್ರೀಡಾ ಸಂಕೀರ್ಣದಲ್ಲಿ 14 ಅಂತಸ್ತಿನ ಕಟ್ಟಡವನ್ನು ಕೋವಿಡ್-19 ವಿಶೇಷ ಆಸ್ಪತ್ರೆಯಾಗಿ ಪರಿವರ್ತಿಸಿದೆ.

Telangana transforms 14-storey tower into COVID-19 hospital in 20 days
ತೆಲಂಗಾಣ: ಕೇವಲ 20 ದಿನಗಳಲ್ಲಿ ಸಿದ್ದವಾಯ್ತು 14 ಅಂತಸ್ಥಿನ ಕೋವಿಡ್-19 ಆಸ್ಪತ್ರೆ..!

By

Published : Apr 21, 2020, 11:18 PM IST

Updated : Apr 21, 2020, 11:40 PM IST

ಹೈದರಾಬಾದ್: ತೆಲಂಗಾಣ ಸರ್ಕಾರವು ಕೇವಲ 20 ದಿನಗಳ ಅಂತರದಲ್ಲಿ ಗಚಿಬೌಲಿ ಕ್ರೀಡಾ ಸಂಕೀರ್ಣದಲ್ಲಿ 14 ಅಂತಸ್ತಿನ ಕಟ್ಟಡವನ್ನು ಕೋವಿಡ್-19 ವಿಶೇಷ ಆಸ್ಪತ್ರೆಯಾಗಿ ಪರಿವರ್ತಿಸಿದೆ.

2002 ರಲ್ಲಿ ನಿರ್ಮಿಸಲಾದ ಕ್ರೀಡಾ ಸಂಕೀರ್ಣದ ಭಾಗವಾದ ಕಟ್ಟಡವನ್ನು 50 ತೀವ್ರ ನಿಗಾ ಘಟಕ (ಐಸಿಯು) ಹಾಸಿಗೆಗಳೊಂದಿಗೆ ಪೂರ್ಣ ಪ್ರಮಾಣದ ಕೊರೊನಾ ವೈರಸ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲು ಸುಮಾರು 1,000 ಕೆಲಸಗಾರರು ಹಗಲಿರುಳು ಶ್ರಮಿಸಿದ್ದಾರೆ.

ತೆಲಂಗಾಣ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿ, ಮರಣ ಪ್ರಮಾಣ ಕಡಿಮೆ ಮಾಡಿ, ರೋಗಿಗಳಿಗೆ ಅವಕಾಶ ಕಲ್ಪಿಸಲು ಈ ಸೌಲಭ್ಯವನ್ನು ಸಿದ್ಧಪಡಿಸಲಾಗಿದೆ ಎಂದಿದ್ದಾರೆ. ಕೊರೊನಾ ವೈರಸ್ ಹರಡುವಿಕೆಯ ಕೇಂದ್ರ ಸ್ಥಳ ವುಹಾನ್‌ನಲ್ಲಿ ಕೇವಲ ಹತ್ತು ದಿನಗಳಲ್ಲಿ ತಾತ್ಕಾಲಿಕ 1,000 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಿಸಲಾಗಿತ್ತು. ಇದೇ ಮಾದರಿಯಲ್ಲಿ ನಾವು ಆಸ್ಪತ್ರೆ ಸಿದ್ಧಪಡಿಸಿದ್ದೇವೆ ಎಂದು ಹಿರಿಯ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಚೀನಾ ಮಾತ್ರವಲ್ಲ, ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಮತ್ತು ಯೋಜನೆಗಳ ಅನುಷ್ಠಾನದ ದೃಷ್ಟಿಯಿಂದ ತೆಲಂಗಾಣ ರಾಜ್ಯ ಸರ್ಕಾರ ಸಾಬೀತುಪಡಿಸಿದೆ ಎಂದು ಅಧಿಕಾರಿ ಇದೇ ವೇಳೆ ಬೆನ್ನು ತಟ್ಟಿಕೊಂಡರು. ತೆಲಂಗಾಣ ರಾಜ್ಯ ವೈದ್ಯಕೀಯ ಸೇವೆಗಳ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಟಿಎಸ್‌ಎಂಎಸ್‌ಐಡಿಸಿ) ಈ ಕಾರ್ಯವನ್ನು ಕೈಗೆತ್ತಿಕೊಂಡು ಮೂರು ವಾರಗಳಲ್ಲಿ ಮುಗಿಸಿತು. ಸೋಮವಾರದವರೆಗೆ, ತೆಲಂಗಾಣದಲ್ಲಿ 700ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳಿವೆ ಮತ್ತು 23 ಜನರು ವೈರಸ್‌ನಿಂದ ಸಾವನ್ನಪ್ಪಿದ್ದಾರೆ.

ಇನ್ಫ್ರಾ ಕಾರ್ಪೊರೇಷನ್ ಈ ಕಾರ್ಯವನ್ನು ಕೈಗೆತ್ತಿಕೊಂಡಾಗ ಯಾವುದೇ ಮೂಲ ಸೌಲಭ್ಯಗಳು ಅಥವಾ ಕಾಂಪ್ಲೆಕ್ಸ್‌ನಲ್ಲಿ ನೀರು, ನೈರ್ಮಲ್ಯ ಮತ್ತು ಕೊಳಾಯಿಗಳಂತಹ ಸೌಲಭ್ಯಗಳು ಇರಲಿಲ್ಲ ಎಂದು ಅಧಿಕಾರಿ ಹೇಳಿದರು."ನಾವು ಪ್ರತಿ ಮಹಡಿಯನ್ನು ಒಂದು ಘಟಕವಾಗಿ ತೆಗೆದುಕೊಂಡು ಕಟ್ಟಡವನ್ನು ಪೂರ್ಣಗೊಳಿಸಿದ್ದೇವೆ.

ಅದೇ ಸಮಯದಲ್ಲಿ ಇತರ ಅವಶ್ಯಕತೆಗಳಾದ ಅನಿಲ ಮತ್ತು ಆಮ್ಲಜನಕದ ಪೈಪ್‌ಲೈನ್‌ಗಳನ್ನು ಏಕಕಾಲದಲ್ಲಿ ಸಂಪರ್ಕಿಸಲಾಗಿದೆ. ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯ ಸಮನ್ವಯದಿಂದ ಈ ಕೆಲಸವನ್ನು ಮಾಡಲಾಗಿದೆ" ಎಂದು ಅಧಿಕಾರಿ ಹೇಳಿಕೆ ನೀಡಿದ್ದಾರೆ.

Last Updated : Apr 21, 2020, 11:40 PM IST

ABOUT THE AUTHOR

...view details