ಕರ್ನಾಟಕ

karnataka

ETV Bharat / bharat

ಆಪರೇಷನ್​ ಸ್ಮೈಲ್​ ನಲ್ಲಿ 3600 ಮಕ್ಕಳನ್ನು ಪಾರು ಮಾಡಿದ ತೆಲಂಗಾಣ ಪೊಲೀಸ್​

ಆಪರೇಷನ್​​ ಸ್ಮೈಲ್​ ಕಾರ್ಯಾಚರಣೆ ಮೂಲಕ ತೆಲಂಗಾಣ ಪೊಲೀಸರು ಜನವರಿ ತಿಂಗಳೊಂದರಲ್ಲೇ ಬರೋಬ್ಬರಿ 3600 ಮಕ್ಕಳನ್ನು ರಕ್ಷಿಸಿದ್ದಾರೆ.

Telangana police rescue 3600 children in Operation smile
ಆಪರೇಷನ್​ ಸ್ಮೈಲ್​ ನಲ್ಲಿ 3600 ಮಕ್ಕಳನ್ನು ಪಾರು ಮಾಡಿದ ತೆಲಂಗಾಣ ಪೊಲೀಸ್​

By

Published : Feb 2, 2020, 11:15 AM IST

ಹೈದರಾಬಾದ್​(ತೆಲಂಗಾಣ):ಆಪರೇಷನ್​​ ಸ್ಮೈಲ್​ ಕಾರ್ಯಾಚರಣೆ ಮೂಲಕ ತೆಲಂಗಾಣ ಪೊಲೀಸರು ಜನವರಿ ತಿಂಗಳೊಂದರಲ್ಲೇ 3600 ಮಕ್ಕಳನ್ನು ರಕ್ಷಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ತೆಲಂಗಾಣ ಐಜಿ (ಕಾನೂನು ಸುವ್ಯವಸ್ಥೆ) ಸ್ವಾತಿ ಲಕ್ರಾ, ವಿವಿಧ ವಿಭಾಗಗಳಲ್ಲಿ ದಾಖಲಾಗಿದ್ದ ಒಟ್ಟು 411 ಪ್ರಕರಣಗಳಲ್ಲಿ 3600 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ಅದರಲ್ಲಿ ಒಟ್ಟು 2923 ಹುಡುಗರು ಹಾಗೂ 677 ಹುಡುಗಿಯರು ಇದ್ದಾರೆ. ಜನವರಿ ಪ್ರಾರಂಭದಿಂದ ಅಂತ್ಯದವರೆಗೂ ನಡೆದ ಕಾರ್ಯಾಚರಣೆಯಲ್ಲಿ ಕಾಣೆಯಾಗಿದ್ದ ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.

ನಗರದ ಬಸ್​ ನಿಲ್ದಾಣ, ರೈಲ್ವೆ ನಿಲ್ದಾಣ, ಧಾರ್ಮಿಕ ಸ್ಥಳಗಳು, ಇಟ್ಟಿಗೆ ಉದ್ಯಮ, ಅಂಗಡಿಗಳು, ಟೀ ಸ್ಟಾಲ್​ ಸೇರಿದಂತೆ ಬೀದಿ ಬದಿಯಲ್ಲಿದ್ದ ಮಕ್ಕಳನ್ನು ತೆಲಂಗಾಣ ಪೊಲೀಸರ ತಂಡ ಕಾರ್ಯಾಚರಣೆ ಮೂಲಕ ರಕ್ಷಿಸಿದೆ.

ಒಟ್ಟು ಮಕ್ಕಳಲ್ಲಿ 1982 ಮಕ್ಕಳನ್ನು ಅವರ ಪೋಷಕರಿಗೆ ಒಪ್ಪಿಸಲಾಗಿದೆ. ಅದರಲ್ಲಿ 1618 ಮಕ್ಕಳನ್ನು ರಕ್ಷಣಾ ಕೇಂದ್ರದಲ್ಲಿ ಬಿಡಲಾಗಿದೆ. ಇನ್ನೂ 1292 ಮಕ್ಕಳಲ್ಲಿ ಕೆಲವರು ಅನ್ಯ ರಾಜ್ಯ ಮಾತ್ರವಲ್ಲದೆ ನೇಪಾಳ, ಮ್ಯಾನ್ಮಾರ್​ನಂತಹ ಅನ್ಯ ದೇಶದವರೂ ಇದ್ದಾರೆ ಎಂದು ಇದೇ ವೇಳೆ ಐಜಿ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details