ಭಾರತ ಗಾಂಧೀಜಿಯವರ 150ನೇ ಜಯಂತ್ಯುತ್ಸವದ ಆಚರಣೆಯಲ್ಲಿದೆ. ದೇಶದ ಸ್ವಾತಂತ್ರ್ಯ ಇತಿಹಾಸದಲ್ಲಿ ಗಾಂಧೀಜಿ ಅವರ ಹೋರಾಟ ಹಾಗೂ ಅವರ ಸಿದ್ಧಾಂತಗಳು ತಮ್ಮದೇ ಆದ ಪ್ರಭಾವ ಬೀರಿದ್ದವು. ಅದರಲ್ಲಿ ಅವರು ದೇಶದ ಮೇಲೆ ಬೀರಿದ ಮೊದಲ ಪ್ರಭಾವ ಅಂದ್ರೆ ಅದು ಸ್ವಚ್ಛತೆ ಮತ್ತು ಶೌಚಾಲಯ ವಿಷಯವಾಗಿ ಅನುಸರಿಸಿದ ನೀತಿಗಳು. ಸ್ವಚ್ಛತೆ ಬಗ್ಗೆ ಅವರು ಹೊಂದಿದ್ದ ಒಳನೋಟ.
ಸ್ವಚ್ಛತೆ ಬಗ್ಗೆ ಅವರು ಶತಮಾನಗಳ ಹಿಂದೆಯೇ ಯೋಚಿಸಿದ್ದರು. ತಾವೇ ಸ್ವಚ್ಛವಾಗಿರುವುದಷ್ಟೇ ಅಲ್ಲ, ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಲು ಶ್ರಮಿಸಿದ್ದರು. ಈ ಲೇಖನ ಈಗೇಕೆ ಇಷ್ಟು ಪ್ರಸ್ತುತ ಅನ್ನೋದೇ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನ ಘೋಷಣೆ ಮಾಡಿದ್ದಾರೆ. ಈ ಯೋಜನೆ ಈಗ ವಿಶ್ವದಾದ್ಯಂತ ಸದ್ದು ಕೂಡಾ ಮಾಡ್ತಿದೆ. ಈ ಹಿನ್ನೆಲೆಯಲ್ಲಿ ಗಾಂಧಿ ಪ್ರತಿಪಾದಿಸಿದ್ದ ಸ್ವಚ್ಛತಾ ಸಿದ್ಧಾಂತ ಈಗ ಪ್ರಸ್ತುತವಾಗಿದೆ.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟದ ನೇತೃತ್ವ ವಹಿಸಿಕೊಂಡಿದ್ದ ಗಾಂಧೀಜಿ ಸ್ವಚ್ಛತೆಯ ರಾಯಭಾರಿಯಾಗಿಯೂ ಕೆಲಸ ಮಾಡಿದ್ದರು. ಸ್ವಚ್ಛತೆ, ಅಸ್ಪೃಶ್ಯತೆ ಹಾಗೂ ಸ್ವಾತಂತ್ರ್ಯ ಈ ಮೂರು ವಿಷಯಗಳಲ್ಲಿ ಗಾಂಧಿ ಏಕಕಾಲಕ್ಕೆ ಮಾಡಿದ್ದು ವಿಶೇಷ. ಪ್ರತಿಯೊಬ್ಬರು ಅವರದ್ದೇ ಆದ ಜಾಡಿಮಾಲಿತ್ವವನ್ನು ಹೊಂದಿರುತ್ತಾರೆ. ಅಂದರೆ ಪ್ರತಿಯೊಬ್ಬ ಕೇವಲ ಸ್ವಚ್ಛವಾಗಿರುವುದಷ್ಟೇ ಅಲ್ಲ, ಅದು ಅವರ ಜವಾಬ್ದಾರಿ ಕೂಡಾ ಆಗಿರುತ್ತದೆ ಎಂದು ಗಾಂಧಿ ಹೇಳಿದ್ದರು.
ಬರೀ ಮಾತನಾಡುವುದಷ್ಟೇ ಅಲ್ಲ, ಅದನ್ನು ಜಾರಿಯಲ್ಲಿ ತರುವುದು ಅಥವಾ ಅನುಸರಿಸುವುದು ಅಷ್ಟೇ ಮುಖ್ಯವಾಗಿರುತ್ತದೆ. ಸ್ವಚ್ಛತೆಯನ್ನು ಉತ್ತೇಜಿಸಲು ಹಲವರು ತಮ್ಮದೇ ಆದ ಅನುಕರಣೀಯ ಮಾನದಂಡಗಳನ್ನು ಪ್ರದರ್ಶಿಸಿದ ಅನೇಕ ಉದಾಹರಣೆಗಳು ಭಾರತದಲ್ಲಿ ಸಾಕಷ್ಟು ಕಂಡು ಬರುತ್ತವೆ. ಈ ವಿಷಯವಾಗಿ ಗಾಂಧೀಜಿ ಅವರ ಈ ಒಂದು ಸನ್ನಿವೇಶ ನೆನಪಿನಲ್ಲಿ ಇಟ್ಟುಕೊಳ್ಳುವಂತಹದ್ದು. ಮಹಾತ್ಮ ದಕ್ಷಿಣ ಆಫ್ರಿಕಾದಲ್ಲಿದ್ದಾಗ, ಅವರು ಒಮ್ಮೆ ಭಾರತಕ್ಕೆ ಭೇಟಿ ನೀಡ್ತಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಕೋಲ್ಕತ್ತಾ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿ, ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರನ್ನ ಕೆಟ್ಟದಾಗಿ ಯಾಕೆ ಕಾಣ್ತಾರೆ ಎಂಬ ಬಗ್ಗೆ ಕಾರಣವನ್ನ ಕೊಡ್ತಾರೆ.
ಇನ್ನು ಕಾಂಗ್ರೆಸ್ ಕ್ಯಾಂಪ್ನಲ್ಲಿ ಶೌಚ ವ್ಯವಸ್ಥೆ ತೀರಾ ಕೆಟ್ಟದಾಗಿತ್ತು. ಇದಕ್ಕೆ ಕಾರಣ ಏನು ಅಂತಾ ಗಾಂಧೀಜಿ ಅಲ್ಲಿನ ಸ್ವಯಂ ಸೇವಕರನ್ನು ಪ್ರಶ್ನಿಸಿದ್ದರಂತೆ. ಆಗ ಆ ಸ್ವಯಂ ಸೇವಕ ಇದು ಕಸ ಗೂಡಿಸುವವ ಮಾಡಿದ ಕೆಲಸವೆಂದು ಹೇಳಿದ್ದರಂತೆ. ಹೀಗಾಗಿ ಗಾಂಧೀಜಿ ಸ್ವತಃ ಸ್ವಚ್ಛತೆಗೆ ಇಳಿದರು. ತಾವೇ ಜಾಡಿ ಮಾಲಿ ತೆಗೆದುಕೊಂಡು ಕಸ ಗೂಡಿಸಿದರು. ಪಾಶ್ಚಿಮಾತ್ಯ ಶೈಲಿಯ ಡ್ರೆಸ್ನಲ್ಲಿದ್ದರೂ ಕಸ ಗೂಡಿಸಿದ್ದನ್ನು ಕಂಡು ಕಾಂಗ್ರೆಸ್ ಪಾಳಯ ದಂಗಾಗಿ ಹೋಗಿದ್ದರು.
ಇನ್ನು ಮಹಾತ್ಮಗಾಂಧಿ ಭಾರತಕ್ಕೆ ಮರಳಿ ಬಂದ ಮೇಲೆ ಸ್ವಚ್ಛತೆಗಾಗಿ ಸ್ವಯಂ ಸೇವಕರ ಗುಂಪುಗಳನ್ನ ರಚನೆ ಮಾಡಿದರು. ಸಹಜವಾಗಿ ಸ್ವಚ್ಛತೆ ಮಾಡುವವರನ್ನ ಭಾರತದಲ್ಲಿ ಭಂಗಿಗಳೆಂದು ಕರೆಯುತ್ತಿದ್ದರು. ಈ ಕೆಲಸ ಮಾಡುವವರು ಕೆಳ ವರ್ಗದಿಂದಲೇ ಬಂದವರಾಗಿರುತ್ತಿದ್ದರು. ಈ ವ್ಯವಸ್ಥೆಯನ್ನ ನಿಧಾನವಾಗಿ ಬದಲಿಸಿದ ಬಾಪೂ ಮೇಲ್ವರ್ಗದ ಜನರು ಸ್ವಚ್ಛತೆ ಕೆಲಸದಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಿದರು. ಈ ವಿಷಯದಲ್ಲಿ ಅವರ ಬದ್ಧತೆ ಹಾಗೂ ಪ್ರಭಾವ ಎಲ್ಲೆಡೆ ಆವರಿಸಿತು. ಈ ಮೂಲಕ ಅವರು ಅಸ್ಪೃಶ್ಯತೆ ನಿವಾರಣೆಗೆ ಅಡಿಪಾಯ ಹಾಕಿದರು. ಈ ಮೂಲಕ ಸ್ವಚ್ಛತೆ ವಿಷಯದಲ್ಲಿ ಆಗ ಭಾರತೀಯರು ಹೊಂದಿದ್ದ ದೃಷ್ಟಿಕೋನವನ್ನೇ ಬದಲಾಯಿಸಿದ್ದರು.
ವಾಸ್ತವವಾಗಿ ಮಹಾತ್ಮರ ಈ ಅಭಿಯಾನ ಹಾಗೂ ಕಾಳಜಿ ಆರಂಭವಾಗಿದ್ದೇ ದಕ್ಷಿಣ ಆಫ್ರಿಕಾದಲ್ಲಿ. ಆಫ್ರಿಕಾವೇ ಸ್ವಚ್ಛತೆ ಅಭಿಯಾನಕ್ಕೆ ಮೂಲ ಪ್ರೇರಣೆ. ದಕ್ಷಿಣ ಆಫ್ರಿಕಾದಲ್ಲಿ ಮೂಲ ನಿವಾಸಿಗಳಾದ ನಿಗ್ರೋಗಳ ಬಗ್ಗೆ ಹೊಂದಿದ್ದ ಹಾಗೂ ನೈರ್ಮಲ್ಯದ ಬಗ್ಗೆ ಸೃಷ್ಟಿಸಿದ್ದ ನಕಾರಾತ್ಮಕ ಮನೋಭಾವ ಹೋಗಲಾಡಿಸುವ ಬಗ್ಗೆ ಪ್ರಾಥಮಿಕ ಗಮನ ಹರಿಸಿದ್ದರು. ಇನ್ನು ಭಾರತೀಯರ ವಿಷಯಕ್ಕೆ ಬರುವುದಾದರೆ ಇದನ್ನು ಪ್ರತ್ಯೇಕವಾಗಿಯೇ ಗಮನಿಸಬೇಕಾಗುತ್ತದೆ.