ನವದೆಹಲಿ : ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಮ್ಮ 67ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಏಮ್ಸ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನ-ಮಾನ ಕಲ್ಪಿಸುವ ಆರ್ಟಿಕಲ್ 370 ರದ್ದುಗೊಳ್ಳುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ವೀಟ್ ಮೂಲಕ ಶುಭ ಕೋರಿದ್ದರು. ಅದೇ ಅವರ ಕೊನೆಯ ಟ್ವೀಟಾಗಿರುವುದು ವಿಶೇಷ.
ನನ್ನ ಜೀವನದಲ್ಲಿ ಇಂತಹ ದಿನಕ್ಕಾಗಿ ಕಾಯುತ್ತಿದ್ದೆ.. ಪ್ರಧಾನಿ ಮೋದಿಗೆ ಲಾಸ್ಟ್ ಟ್ವೀಟ್ ಮಾಡಿರುವ ಸುಷ್ಮಾ! - sushma swaraj
ಇಂದು ಮಧ್ಯಾಹ್ನ ಆರ್ಟಿಕಲ್ 370 ರದ್ದತಿಗೆ ಲೋಕಸಭೆಯಿಂದ ಬಿಲ್ ಪಾಸಾಗಿದ್ದು, ಇದಕ್ಕೆ ಮೋದಿಯವರಿಗೆ ಸುಷ್ಮಾ ಶುಭ ಕೋರಿದ್ದರು. ಮೂರು ಗಂಟೆಗಳ ಹಿಂದೆ ಬಿಲ್ ಪಾಸ್ ಆಗಿದ್ದಕ್ಕೆ ಟ್ವೀಟ್ ಮೂಲಕ ಶುಭ ಕೋರಿದ್ದ ಅವರು, ನನ್ನ ಜೀವನದಲ್ಲಿ ಈ ದಿನಕ್ಕಾಗಿ ಕಾಯುತ್ತಿದ್ದೆ. ಥ್ಯಾಂಕ್ ಯೂ ವೆರಿ ಮಚ್’ ಅಂತಾ ಟ್ವೀಟ್ ಮಾಡಿದ್ದರು.
ಸುಷ್ಮಾ ಕೊನೆಯ ಟ್ವೀಟ್
ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370 ಬಿಲ್ ರದ್ದತಿ ಪ್ರಸ್ತಾವ ಅಂಗೀಕಾರಗೊಳ್ಳುತ್ತಿದ್ದಂತೆ ಮೋದಿಗೆ ವಿಶ್ ಮಾಡಿದ್ದ ಸುಷ್ಮಾ ಸ್ವರಾಜ್, ಪ್ರಧಾನಮಂತ್ರಿ ಜೀ, ನಿಮಗೆ ಅಭಿನಂದನೆಗಳು, ನಾನು ನನ್ನ ಜೀವನದಲ್ಲಿ ಈ ದಿನ ನೋಡಲು ಕಾಯುತ್ತಿದ್ದೆ ಎಂದು ಬರೆದುಕೊಂಡಿದ್ದರು. ಆದರೆ, ಇದೀಗ ಅವರು ಏಮ್ಸ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸುಷ್ಮಾ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಕಂಬನಿ ಮಿಡಿದಿದ್ದಾರೆ.