ನವದೆಹಲಿ:ಶೇ. 50 ಇವಿಎಂಗಳ ಮತ ಎಣಿಕೆಯನ್ನ ವಿವಿ ಪ್ಯಾಟ್ಗಳೊಂದಿಗೆ ತಾಳೆ ಮಾಡಿ ನೋಡಲು ನಿರ್ದೇಶನ ನೀಡುವಂತೆ ಕೋರಿ ಪ್ರತಿಪಕ್ಷಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ಮುಂದುವರೆದಿದೆ.
ಇವಿಎಂ ವಿವಾದ : ಏಪ್ರಿಲ್ 8 ರವರೆಗೆ 21 ಪ್ರತಿಪಕ್ಷಗಳಿಗೆ ಸಮಯಾವಕಾಶ ನೀಡಿದ ಸುಪ್ರೀಂ - vvpat
21 ಪ್ರತಿಪಕ್ಷಗಳು ಸೇರಿಕೊಂಡು ಶೇ. 50 ಇವಿಎಂಗಳ ಮತ ಎಣಿಕೆಯನ್ನ ವಿವಿ ಪ್ಯಾಟ್ಗಳೊಂದಿಗೆ ತಾಳೆ ಮಾಡಿ ನೋಡುವಂತೆ ಕೋರಿ ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದುವರೆದಿದೆ.
ಸುಪ್ರೀಂಕೋರ್ಟ್ (ಸಂಗ್ರಹ ಚಿತ್ರ)
ವಿವಿಪ್ಯಾಟ್ಗಳನ್ನು ಇವಿಎಂನೊಂದಿಗೆ ಹೋಲಿಕೆ ಮಾಡುತ್ತ ಕುಳಿತರೆ ಫಲಿತಾಂಶ ಪ್ರಕಟಿಸಲು ಸುಮಾರು 6 ದಿನಗಳ ಸಮಯಾವಕಾಶ ಬೇಕಾಗುತ್ತದೆ. ಹಾಗಾಗಿ ಪ್ರತಿಪಕ್ಷಗಳ ವಾದವನ್ನು ಒಪ್ಪಲು ಸಾಧ್ಯವಿಲ್ಲ. 21 ಪ್ರತಿಪಕ್ಷಗಳು ಸಲ್ಲಿಕೆ ಮಾಡಿರುವ ಅರ್ಜಿಯನ್ನ ವಜಾಗೊಳಿಸಬೇಕು ಎಂದು ಚುನಾವಣಾ ಆಯೋಗ, ಸುಪ್ರೀಂಗೆ ನೀಡಿರುವ ಉತ್ತರದಲ್ಲಿ ಕೋರಿತ್ತು.
ಇನ್ನೊಂದೆಡೆ ಸುಪ್ರೀಂಕೋರ್ಟ್ಗೆ ಚುನಾವಣಾ ಆಯೋಗ ಸಲ್ಲಿಕೆ ಮಾಡಿರುವ ಅಫಿಡವಿಟ್ಗೆ ಉತ್ತರಿಸಲು 21 ಪ್ರತಿಪಕ್ಷಗಳಿಗೆ ಏಪ್ರಿಲ್ 8 ರವರೆಗೆ ಸುಪ್ರೀಂಕೋರ್ಟ್ ಸಮಯಾವಕಾಶ ನೀಡಿದೆ.