ಕಾಬೂಲ್: ಆತ್ಮಹತ್ಯಾ ಬಾಂಬರ್ಗಳು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನ ಸಾಹೀಬ್ ಗುರುದ್ವಾರ ಮೇಲೆ ನಡೆಸಿದ ದಾಳಿಯನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ ಖಂಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ದೇಶಗಳಲ್ಲಿ ಅಲ್ಪಸಂಖ್ಯಾತರ ಮೇಲೆ ಸತತ ದೌರ್ಜನ್ಯ ನಡೆಯುತ್ತಿದೆ. ಅವರ ಧಾರ್ಮಿಕ ಸ್ವಾತಂತ್ರ್ಯವನ್ನು ಕಾಪಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಆಗ್ರಹಿಸಿದ್ದಾರೆ.
ಗುರುದ್ವಾರದಲ್ಲಿ ಭಯೋತ್ಪಾದಕರ ಅಟ್ಟಹಾಸಕ್ಕೆ 27 ಬಲಿ: ಕೇಂದ್ರ ಸಚಿವರ ಖಂಡನೆ - ಕಾಬೂಲ್
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನ ಗುರುದ್ವಾರವೊಂದರ ಮೇಲೆ ಭಯೋತ್ಪಾದಕರ ದಾಳಿ ನಡೆದಿದೆ. ದಾಳಿಯಲ್ಲಿ 27 ಮಂದಿ ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ. ಭಯೋತ್ಪಾದಕರ ಕೃತ್ಯಕ್ಕೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.
ಗುರುದ್ವಾರದ ಮೇಲೆ ಭಯೋತ್ಪಾದಕರ ದಾಳಿ
ಕಾಬೂಲ್ನ ಶೋರ್ ಬಜಾರ್ನಲ್ಲಿರುವ ಗುರುದ್ವಾರದ ಮೇಲೆ ಬೆಳಗ್ಗೆ 7.45ಕ್ಕೆ ಶಸ್ತ್ರಸಜ್ಜಿತ ಉಗ್ರರು ದಾಳಿ ನಡೆಸಿದ್ದರು. ಈ ವೇಳೆ, ಆಫ್ಘನ್ ಭದ್ರತಾ ಪಡೆಗಳು ಕೂಡಾ ಸ್ಥಳಕ್ಕೆ ಧಾವಿಸಿ ಉಗ್ರರಿಗೆ ಪ್ರತಿರೋಧ ತೋರಿದ್ದವು. ಈ ವೇಳೆ, 27 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದರು.ಬ ಈ ವೇಳೆ ದಾಳಿ ಮಾಡಿದ್ದ ನಾಲ್ವರು ಭಯೋತ್ಪಾದಕರನ್ನು ಆಫ್ಘನ್ ಭದ್ರತಾ ಪಡೆ ಹೊಡೆದುರುಳಿಸಿದೆ. ಈ ದಾಳಿಯ ಹೊಣೆಯನ್ನು ಇನ್ನೂ ಯಾವ ಭಯೋತ್ಪಾದಕ ಸಂಘಟನೆಯೂ ಹೊತ್ತಿಲ್ಲ.
Last Updated : Mar 25, 2020, 3:35 PM IST