ಶ್ರೀನಗರ: ಮಕ್ಕಳಿಗೆ ಈಗ ಶಿಕ್ಷಕರು ಥಳಿಸುವಂತಿಲ್ಲ. ಈ ಸಂಬಂಧ ಕಠಿಣ ನಿಯಮಗಳಿದ್ದರೂ ಶಿಕ್ಷಕರು ಮಾತ್ರ ಈ ನಿಯಮ ಸರಿಯಾಗಿ ಪಾಲಿಸುವಂತೆ ಕಾಣುತ್ತಿಲ್ಲ. ಈ ಮಾತಿಗೆ ಇಂಬು ನೀಡುವಂತೆ ಜಮ್ಮು ಕಾಶ್ಮೀರದಲ್ಲಿ ಶಿಕ್ಷಕರೊಬ್ಬರು ಅಮಾನುಷ ರೀತಿಯಲ್ಲಿ ನಡೆದುಕೊಂಡಿದ್ದಾರೆ.
ಇಲ್ಲಿನ ಗುಜ್ಜರ್ ಮತ್ತು ಬಾಕೇರ್ವಾಲ್ ಹಾಸ್ಟೆಲ್ನಲ್ಲಿ ಶಿಕ್ಷಕರೊಬ್ಬರು ಕೇವಲ 10 ನಿಮಿಷ ಕ್ಲಾಸ್ಗೆ ತಡವಾಗಿ ಬಂದಿದ್ದರಿಂದ ರೊಚ್ಚಿಗೆದ್ದು, ಎಲ್ಲರನ್ನೂ ಸಾಲಾಗಿ ನಿಲ್ಲಿಸಿ ಏಟು ಕೊಟ್ಟಿದ್ದಾರೆ. ತಲೆ ಬಗ್ಗಿಸಿ ಸೊಂಟ ಮೇಲೆ ಮಾಡಿಸಿ ಬಾರಿಸಿರುವ ಫೋಟೋಗಳು ವೈರಲ್ ಆಗಿದೆ.