ನವದೆಹಲಿ:ಸ್ಪೀಕರ್ ಹಾಗೂ ಸರ್ಕಾರಕ್ಕೆ ಶೀಘ್ರ ವಿಶ್ವಾಸಮತ ಸಾಬೀತು ಮಾಡುವಂತೆ ಕೋರಿ ಸುಪ್ರೀಂಕೋರ್ಟ್ಗೆ ಪಕ್ಷೇತರ ಶಾಸಕರು ಸಲ್ಲಿಸಿದ್ದ ಅರ್ಜಿಯನ್ನ ಹಿಂಪಡೆಯಲಾಗಿದೆ..
ಬುಧವಾರ ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ವೇಳೆ ಹಿರಿಯ ವಕೀಲರಾದ ಮುಕುಲ್ ರೋಹ್ಟಗಿ ಹಾಗೂ ಅಭಿಷೇಕ್ ಮನು ಸಿಂಘ್ವಿ ಗೈರಾದ ಹಿನ್ನೆಲೆಯಲ್ಲಿ ಇಂದಿಗೆ ಮುಂದೂಡಲಾಗಿತ್ತು.
ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ.... ಹಿರಿಯ ವಕೀಲರೇ ಗೈರು..!
ಇಂದಿನ ವಿಚಾರಣೆಯಲ್ಲೂ ಸಹ ಪಕ್ಷೇತರ ಪರ ವಕೀಲ ಹಾಗೂ ಕಾಂಗ್ರೆಸ್ ಪರ ವಕೀಲರಿಬ್ಬರೂ ಗೈರಾಗಿದ್ದರು. ಇದರ ಜೊತೆಯಲ್ಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಈಗಾಗಲೇ ಮುಕ್ತಾಯವಾಗಿರುವುದರಿಂದ ಅರ್ಜಿ ಮಹತ್ವ ಕಳೆದುಕೊಂಡಿದೆ.
ಹಿರಿಯ ವಕೀಲರ ಬಗ್ಗೆ ಸಿಜೆಐ ಅಸಮಾಧಾನ:
ಅರ್ಜಿಯನ್ನು ಹಿಂಪಡೆಯಲು ಯಾವುದೇ ಆಕ್ಷೇಪಣೆ ಇಲ್ಲ ಮುಖ್ಯಮಂತ್ರಿ ಪರ ವಕೀಲ ರಾಜೀವ್ ಧವನ್ ಕೋರ್ಟ್ಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದರು. ಈ ವೇಳೆ ಇಂದಿನ ವಿಚಾರಣೆ ವೇಳೆ ಗೈರಾದ ಹಿರಿಯ ವಕೀಲರ ಬಗ್ಗೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅಸಮಾಧಾನ ವ್ಯಕ್ತಪಡಿಸಿದರು.
ತುರ್ತು ವಿಚಾರಣೆ ಅಗತ್ಯವಿದ್ದ ವೇಳೆ ಎಲ್ಲರೂ ಹಾಜರಿರುತ್ತಾರೆ. ಅರ್ಜಿ ಹಿಂಪಡೆಯುವ ವೇಳೆ ಯಾರೂ ಇಲ್ಲಿರುವುದಿಲ್ಲ ಎಂದು ಗೊಗೊಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.