ಕರ್ನಾಟಕ

karnataka

ETV Bharat / bharat

ಹೆಣ್ಣು ಕೊಟ್ಟ ಅತ್ತೆಗೆ ಎಸಿ ಕೊಟ್ಟ ಅಳಿಯ! ಹೀಗೊಬ್ಬ ಅಭಿಮಾನದ ಅಳಿಯ! - undefined

ಬಿರುಬಿಸಿಲಿಗೆ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ತತ್ತರಿಸಿದೆ. ಆದ್ರೆ, ಈ ಗುಡಿಸಲಿನಲ್ಲಿ ವಾಸವಾಗಿರೋ ಮಹಿಳೆ ಮಾತ್ರ ಬಿರುಬಿಸಿಲಿಗೂ ತಣ್ಣಗಿದ್ದಾರೆ. ಕಾರಣ ಅವರ ಮನೆಗೆ ಹಾಕಿಸಿರೋ ಎಸಿ. ಅಷ್ಟಕ್ಕೂ ಗುಡಿಸಲಿಗೆ ಯಾಕೆ ಎಸಿ ಹಾಕ್ಸಿದ್ರು ಅನ್ನೋ ಯೋಚನೆ ನಿಮ್ಗೆ ಬಾರದೇ ಇರದು. ಇದು ಅತ್ತೆಗೆ ಅವರ ಅಳಿಯ ಕೊಡಿಸಿರೋ ಗಿಫ್ಟ್​

ಅತ್ತೆಯ ಗುಡಿಸಲಿಗೆ ಎಸಿ ಹಾಕಿಸಿದ ಅಳಿಯ

By

Published : Jun 4, 2019, 6:07 PM IST

ಪ್ರಕಾಶಂ(ಆಂಧ್ರ ಪ್ರದೇಶ) :ಇಲ್ಲೊಬ್ಬ ಅಳಿಯ ತನಗೆ ಮಗಳನ್ನು ಕೊಟ್ಟ ಅಭಿಮಾನ ಹಾಗೂ ಅಕ್ಕರೆಯಿಂದ ತನ್ನ ಅತ್ತೆ ಮನೆಗೇ ಎಸಿ ಹಾಕಿಸಿದ್ದಾನೆ.

ನೆರೆಯ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಒಂಗೋಲು ಪಟ್ಟಣದ ಬಾಲಾಜಿ ನಗರದ ಅಳಿಯನೊಬ್ಬ, ಬಿರು ಬಿಸಿಲಿನಲ್ಲಿ ನನ್ನ ಅತ್ತೆ ತಂಪಗಿರಬೇಕೆಂದು ಅತ್ತೆಯ ಗುಡಿಸಲಿಗೇ ಕೂಲರ್​ ಹಾಕಿಸಿದ್ದಾನೆ. ಹೇಳಿ ಕೇಳಿ ಆಂಧ್ರ ಹಾಗೂ ತೆಲಂಗಾಣದಲ್ಲಿ ಬಿಸಿಲು ಜಾಸ್ತಿ. ಈ ಬಿಸಿಲಿಗೆ ಹೈರಾಣಾಗೋದು ಗ್ಯಾರಂಟಿ. ಈ ನಡುವೆ ಈ ಅಳಿಯನ ಸೇವೆ ಮಾತ್ರ ನೋಡುಗರ ಹುಬ್ಬೇರಿಸುವಂತೆ ಮಾಡಿದೆ.

ಅತ್ತೆಯ ಗುಡಿಸಲಿಗೆ ಎಸಿ ಹಾಕಿಸಿದ ಅಳಿಯ

ಸಾಮಾನ್ಯವಾಗಿ ದುಡ್ಡಿದ್ದು, ದೊಡ್ಡ ಮನೆ ಕಟ್ಟಿಸಿಕೊಂಡೋರು ಎಸಿ ಹಾಕಿಸೋ ಬಗ್ಗೆ ಯೋಚನೆ ಮಾಡೋದುಂಟು. ಆದ್ರೆ ಈ ಅಳಿಯ ಮಾತ್ರ ಸ್ವಲ್ಪ ಡಿಫರೆಂಟ್​. ಅರಮನೆಯಂಥಾ ಮನೆ ಇಲ್ಲದಿದ್ರೂ, ಇರೋ ಗುಡಿಸಲಿಗೆ ಎಸಿ ಹಾಕಿಸಿದ್ದಾನೆ. ಸಿಕ್ರೆ ಇಂಥಾ ಅಳಿಯ ಸಿಗ್ಬೇಕಲ್ವೇ!

For All Latest Updates

TAGGED:

ABOUT THE AUTHOR

...view details