ಕರ್ನಾಟಕ

karnataka

ETV Bharat / bharat

ಮತ್ತೆ ನಾಲಗೆ ಹರಿಬಿಟ್ಟ ಆಜಂ ಖಾನ್​​... ಮಹಿಳಾ ಸಂಸದರಿಂದ ಭಾರಿ ವಿರೋಧ - ಸ್ಮೃತಿ ಇರಾನಿ

ಸಂಸದ ಆಜಂ ಖಾನ್​ ವಿವಾದಿತ ಹೇಳಿಕೆ ಬಗ್ಗೆ ಲೋಕಸಭೆಯ ಮಹಿಳಾ ಸದಸ್ಯರು ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಿದ್ದಾರೆ.

ಅಜಂ ಖಾನ್

By

Published : Jul 26, 2019, 2:30 PM IST

ನವದೆಹಲಿ: ಸಂಸದೆ ರಮಾದೇವಿ ಬಗ್ಗೆ ಕೀಳುಮಟ್ಟದ ಮಾತುಗಳನ್ನಾಡಿದ ಸಮಾಜವಾದಿ ಪಾರ್ಟಿಯ ಸಂಸದ ಆಜಂಖಾನ್​​ ಸದ್ಯ ಲೋಕಸಭೆಯಲ್ಲಿ ಮಹಿಳಾ ಸಂಸದೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸಂಸದ ಆಜಂಖಾನ್​ ವಿವಾದಿತ ಹೇಳಿಕೆ ಬಗ್ಗೆ ಲೋಕಸಭೆಯ ಮಹಿಳಾ ಸದಸ್ಯರು ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಿದ್ದಾರೆ. ಶೂನ್ಯ ವೇಳೆಯಲ್ಲಿ ಮಾತನಾಡಿದ ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ, ತಲಾಖ್ ಹೆಸರಿನಲ್ಲಿ ಸದ್ಯ ಮಹಿಳೆಯರ ಮೇಲಾಗುತ್ತಿರುವ ಶೋಷಣೆಯನ್ನು ಸುಮ್ಮನೆ ನೋಡುತ್ತಾ ಕೂರಲು ಸಾಧ್ಯವಿಲ್ಲ ಎಂದು ಖಾರವಾಗಿ ಹೇಳಿದ್ದಾರೆ.

ಸಚಿವೆ ಸ್ಮೃತಿ ಇರಾನಿ ಮಾತಿಗೆ ಬೆಂಬಲ ಸೂಚಿಸಿದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಆಜಂಖಾನ್​ ತಮ್ಮ ಹೇಳಿಕೆಗೆ ಸಭೆಯ ಕ್ಷಮೆಯಾಚಿಸಬೇಕು ಇಲ್ಲವೇ ಕೆಳಮನೆಯಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಪಕ್ಷಾತೀತವಾಗಿ ಹಲವಾರು ಸಂಸದರು ಅಜಂ ಖಾನ್​ ಮಾತನ್ನು ಖಂಡಿಸಿದ್ದಾರೆ. ಜೊತೆಗೆ ಸಂಸದನ ವಿರುದ್ಧ ಕಠಿಣ ಕ್ರಮ ಜರಗಿಸುವಂತೆ ಒತ್ತಾಯಿಸಲಾಗಿದೆ.

ಈ ಬೆಳವಣಿಗೆಗೆ ಸಂಬಂಧಿಸಿದಂತೆ ಸ್ಪೀಕರ್​ ಓಂ ಬಿರ್ಲಾ ಸದ್ಯದಲ್ಲೇ ಸರ್ವಪಕ್ಷ ನಾಯಕ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.

ABOUT THE AUTHOR

...view details