ಅಮೇಠಿ, (ಯುಪಿ) :ಯುಪಿಯಲ್ಲಿ ಈ ಸಾರಿಯೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಧ್ಯೆ ದೊಡ್ಡ ಕದನಕ್ಕೆ ವೇದಿಕೆ ರೆಡಿಯಾಗ್ತಿದೆ. ಇವತ್ತು ನಾಮಪತ್ರ ಸಲ್ಲಿಸುವ ಮೊದಲೆ ಸ್ಮೃತಿ ವಿಶೇಷ ಪೂಜೆ ನಡೆಸಿದ್ದಾರೆ.
ಅಮೇಠಿಯಲ್ಲಿ ರಾಹುಲ್ ಗಾಂಧಿ ಮಣಿಸಲು ಪಣ.. ಪತಿ ಜತೆ ಸ್ಮೃತಿ ಇರಾನಿ ವಿಶೇಷ ಹೋಮ-ಹವನ! - ನಾಮಪತ್ರ ಸಲ್ಲಿಕೆ
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸತತವಾಗಿ ಗೆದ್ದಿರುವ ಅಮೇಠಿ ಕ್ಷೇತ್ರದಿಂದಲೇ ಮತ್ತೆ ಕೇಂದ್ರ ಸಚಿವೆ ಹಾಗೂ ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅಖಾಡಕ್ಕೆ ಧುಮುಕುತ್ತಿದ್ದಾರೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸತತವಾಗಿ ಗೆದ್ದಿರುವ ಅಮೇಠಿ ಕ್ಷೇತ್ರದಿಂದಲೇ ಮತ್ತೆ ಕೇಂದ್ರ ಸಚಿವೆ ಹಾಗೂ ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅಖಾಡಕ್ಕೆ ಧುಮುಕುತ್ತಿದ್ದಾರೆ. ಶತಾಯಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಇರಾನಿ, ನಾಮಪತ್ರಕ್ಕೂ ಮೊದಲೇ ಅಮೇಠಿಯಲ್ಲಿ ವಿಶೇಷ ಪೂಜೆ, ಹೋಮ-ಹವನ ನಡೆಸಿದರು. ಪತಿ ಜತೆಗೆ ಬೆಳ್ಳಂಬೆಳಗ್ಗೆ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡರು.
ಇವತ್ತು ಅಮೇಠಿ ಲೋಕಸಭಾ ಕ್ಷೇತ್ರದಿಂದ ಸಚಿವೆ ಸ್ಮೃತಿ ಇರಾನಿ ನಾಮಪತ್ರ ಸಲ್ಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಮೃತಿ ದೇವರ ಮೊರೆ ಹೋದರು. ಅಮೇಠಿ ಕ್ಷೇತ್ರದಿಂದಲೇ 2014ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸ್ಮೃತಿ ಇರಾನಿ ಸೋಲನುಭವಿಸಿದ್ದರು. ಆದರೂ ಮೋದಿ ನೇತೃತ್ವದ ಸರ್ಕಾರದಲ್ಲಿ ಸಚಿವ ಖಾತೆಯನ್ನ ಗಿಟ್ಟಿಸಿಕೊಂಡಿದ್ದರು.