ನವದೆಹಲಿ: ಕಾಫಿ ಡೇ ನಷ್ಟದಲ್ಲಿದ್ದು, ಐಟಿ ಇಲಾಖೆಯಿಂದ ದಾಳಿಯೂ ನಡೆದಿತ್ತು. ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ನೊಂದಿದ್ದ ಮಾಜಿ ಸಿಎಂ ಎಸ್.ಎಂ. ಕೃಷ್ಣರ ಅಳಿಯ ವಿ.ಜಿ ಸಿದ್ಧಾರ್ಥ್ ಸೋಮವಾರ ಸಂಜೆ ಮಂಗಳೂರಿನಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದು, ಸದ್ಯ ಹುಡುಕಾಟ ಭರದಿಂದ ಸಾಗಿದೆ.
ಮೋಸ ಮಾಡುವ ಉದ್ದೇಶ ಇಲ್ಲ, ನಷ್ಟಕ್ಕೆ ನಾನೇ ಕಾರಣ: ಸಿದ್ಧಾರ್ಥ್ ಪತ್ರದ ಪೂರ್ಣ ಪಾಠ
ಅತ್ತ ನವದೆಹಲಿಯಲ್ಲಿ ಬಿಜೆಪಿ ಸಂಸದರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನ ಭೇಟಿ ಮಾಡಿ ಮನವಿ ಪತ್ರವನ್ನ ಕೊಟ್ಟಿದ್ದು,. ಸಿದ್ಧಾರ್ಥ ಹುಡುಕಾಟಕ್ಕೆ ಕೇಂದ್ರ ನೆರವು ನೀಡುವಂತೆ ರಾಜ್ಯದ ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲು ಹಾಗೂ ಸಂಗಣ್ಣ ಕರಡಿ ಸೇರಿದಂತೆ ಹಲವರು ಮನವಿ ಮಾಡಿದ್ದಾರೆ.