ಕರ್ನಾಟಕ

karnataka

ETV Bharat / bharat

ರೈತರ ಮೇಲೆ ನಾವು ಬಲಪ್ರಯೋಗ ಮಾಡದಿರಲು ನಿರ್ಧಾರ ಮಾಡಿದ್ದೆವು: ಗಾಯಾಳು ಪೊಲೀಸ್​

ದೆಹಲಿಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ಇದೀಗ ಮಹತ್ವದ ಮಾಹಿತಿ ಹೊರಬರುತ್ತಿದ್ದು, ತಮ್ಮ ಮೇಲೆ ನಡೆದಿರುವ ಹಲ್ಲೆ ಬಗ್ಗೆ ದೆಹಲಿ ಪೊಲೀಸ್ ಅಧಿಕಾರಿಯೋರ್ವರು ಮಾತನಾಡಿದ್ದಾರೆ.

SHO PC Yadav on farmer protest attack
SHO PC Yadav on farmer protest attack

By

Published : Jan 27, 2021, 5:12 PM IST

Updated : Jan 27, 2021, 5:19 PM IST

ನವದೆಹಲಿ:ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ನಿನ್ನೆ ನಡೆದ ಪ್ರತಿಭಟನೆ ಇಡೀ ದೇಶವೇ ಬೆಚ್ಚಿ ಬೀಳುವಂತೆ ಮಾಡಿದ್ದು, ಸಾವಿರಾರು ಪ್ರತಿಭಟನಾಕಾರರು ಅಪಾರ ಪ್ರಮಾಣದ ಸರ್ಕಾರಿ ಆಸ್ತಿ ಹಾನಿ ಮಾಡಿದ್ದಾರೆ. ಅಲ್ಲದೆ ಪೊಲೀಸರ ಮೇಲೆ ಅಮಾನವೀಯ ರೀತಿಯಲ್ಲಿ ಹಲ್ಲೆ ಮಾಡಿದ್ದಾರೆ.

ಹಿಂಸಾಚಾರದ ಬಗ್ಗೆ ದೆಹಲಿ ಪೊಲೀಸ್ ಅಧಿಕಾರಿ ಮಾಹಿತಿ

ಓದಿ: ಪ್ರತಿಭಟನಾಕಾರರಿಂದ ಪೊಲೀಸ್ ಜೀಪ್​ಗಳ ಮೇಲೆ ದಾಳಿ: ವಿಡಿಯೋ ರಿಲೀಸ್​

ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಪೊಲೀಸ್ ಅಧಿಕಾರಿ ಎಸ್​ಎಚ್​ಒ ಪಿ.ಸಿ.ಯಾದವ್​, ಯಾವುದೇ ಕಾರಣಕ್ಕೂ ರೈತರ ಮೇಲೆ ಬಲಪ್ರಯೋಗ ಮಾಡದೇ ಇರಲು ನಾವು ನಿರ್ಧಾರ ಕೈಗೊಂಡಿದ್ದೇವು ಎಂದಿದ್ದಾರೆ.

ಹಲವು ಪ್ರತಿಭಟನಾಕಾರರು ಏಕಾಏಕಿ ಕೆಂಪುಕೋಟೆಗೆ ನುಗ್ಗಲು ಯತ್ನಿಸಿದಾಗ ನಾವು ಕರ್ತವ್ಯದಲ್ಲಿದ್ದೆವು. ಈ ವೇಳೆ ಅವರನ್ನು ಕೋಟೆಯಿಂದ ಹೊರಗಡೆ ಕಳುಹಿಸಲು ನಿರ್ಧರಿಸಿದ್ದೆವು. ಆದರೆ ಈ ವೇಳೆ ಅವರು ಆಕ್ರಮಣಕಾರಿಯಾಗಿ ವರ್ತನೆ ತೋರಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ. ಪ್ರತಿಭಟನೆ ನಡೆಸಿದವರಲ್ಲಿ ಹಲವರು ಮದ್ಯಪಾನ ಮಾಡಿದ್ದರು ಎಂಬ ಮಾಹಿತಿಯನ್ನು ಅವರು ನೀಡಿದ್ದಾರೆ.

ನಿನ್ನೆ ನಡೆದ ಹಿಂಸಾಚಾರದಲ್ಲಿ ಅನೇಕ ಪೊಲೀಸರು ಗಂಭೀರವಾಗಿ ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಈಗಾಗಲೇ 22 ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಪ್ರತಿಭಟನೆಯಲ್ಲಿ ಕೆಂಪುಕೋಟೆಗೆ ಲಗ್ಗೆ ಹಾಕಿದ ಸಾವಿರಾರು ಜನರು ಬ್ಯಾರಿಕೇಡ್ ಕಿತ್ತು ಹಾಕಿ, ಪೊಲೀಸ್ ಜೀಪ್​ಗಳನ್ನು ಧ್ವಂಸಗೊಳಿಸಿದ್ದಾರೆ. ಇದರ ಜತೆಗೆ ಕೋಟೆ ಮೇಲೆ ಖಾಲ್ಸಾ ಧ್ವಜ ಹಾರಿಸಿದ್ದಾರೆ.

Last Updated : Jan 27, 2021, 5:19 PM IST

ABOUT THE AUTHOR

...view details