ಕರ್ನಾಟಕ

karnataka

ETV Bharat / bharat

ಕೃಷಿ ಮಸೂದೆಗೆ ತೀವ್ರ ವಿರೋಧ: ಸುಖ್ಬೀರ್ ಸಿಂಗ್ ಬಾದಲ್ ವಶಕ್ಕೆ, ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ - ಕೃಷಿ ಮಸೂದೆ ವಿರೋಧಿಸಿ ಕಿಸಾನ್ ಮಾರ್ಚ್

ಪಂಜಾಬ್​ನಲ್ಲಿ ಕೃಷಿ ಮಸೂದೆ ವಿರೋಧಿ ಪ್ರತಿಭಟನೆ ಜೋರಾಗುತ್ತಿದೆ. ಗುರುವಾರ ಕಿಸಾನ್ ಮಾರ್ಚ್ ವೇಳೆ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾಜ್​ ಮತ್ತು ಜಲ ಫಿರಂಗಿ ನಡೆಸಿದರು.

kisan-march
ಕಿಸಾನ್ ಮಾರ್ಚ್ ವೇಳೆ ಬಾದಲ್ ಬಂಧನ

By

Published : Oct 2, 2020, 4:02 AM IST

ಚಂಡೀಗಢ: ಕೇಂದ್ರ ಸರ್ಕಾರದ ಕೃಷಿ ಮಸೂದೆಗಳನ್ನು ವಿರೋಧಿಸಿ ಪಂಜಾಬ್​​ನಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕೇಂದ್ರದ ಮಾಜಿ ಸಚಿವೆ ಹರ್​ಸಿಮ್ರತ್​​ ಕೌರ್​ ಬಾದಲ್ ಹಾಗೂ ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಸೇರಿ ಪಕ್ಷದ ಹಲವು ಕಾರ್ಯಕರ್ತರು ಪೊಲೀಸರು ವಶಕ್ಕೆ ಪಡೆದು, ಬಳಿಕ ಬಿಡುಗಡೆ ಮಾಡಿದ್ದಾರೆ.

ಕೃಷಿ ಮಸೂದೆಗಳನ್ನು ಹಿಂತೆಗೆದುಕೊಳ್ಳುವಂತೆ ಗವರ್ನರ್ ಮೂಲಕ ರಾಷ್ಟ್ರಪತಿಗೆ ಮನವಿ ಮಾಡಲು ಆಗಮಿಸುತ್ತಿದ್ದ ಶಿರೋಮಣಿ ಅಕಾಲಿ ದಳದ ನಾಯಕರನ್ನು ಪೊಲೀಸರು ತಡೆದು, ವಶಕ್ಕೆ ಪಡೆದಿದ್ದರು. ಈ ವೇಳೆ ವಾಗ್ದಾದ ಉಂಟಾದ ಹಿನ್ನೆಲೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್, ಜಲ ಫಿರಂಗಿ ಬಳಸಿದ್ದಾರೆ.

ಕಿಶಾನ್ ಮಾರ್ಚ್ ಮೂಲಕ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಲಾಠಿ ಚಾರ್ಜ್ ಮಾಡಿರುವುದು ನೋವು ತರಿಸಿದೆ ಮತ್ತು ಪ್ರಜಾಪ್ರಭುತ್ವಕ್ಕೆ ಕಪ್ಪು ದಿನ ಎಂದು ಎಸ್​ಎಡಿ ನಾಯಕ ಪ್ರಕಾಶ್ ಸಿಂಗ್ ಬಾದಲ್ ಆಕ್ರೋಶ ಹೊರಹಾಕಿದ್ದಾರೆ.

ಶಿರೋಮಣಿ ಅಕಾಲಿ ದಳ ಈಗಾಗಲೇ ಎನ್​ಡಿಎ ಮೈತ್ರಿಕೂಟದಿಂದ ಹೊರಬಂದಿದ್ದು, ಕೃಷಿ ಮಸೂದೆ ವಿಚಾರವಾಗಿ ಹರ್​​ಸಿಮ್ರತ್​ ಕೌರ್​ ಬಾದಲ್​ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ.

ABOUT THE AUTHOR

...view details