ನವದೆಹಲಿ:ದೇವಸ್ಥಾನದ ಆಡಳಿತದಲ್ಲಿ ತಿರುವಾಂಕೂರು ರಾಜಮನೆತನದ ಹಕ್ಕನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಜಸ್ಟಿಸ್ ಯು.ಯು. ಲಲಿತ್ ಮತ್ತು ಜಸ್ಟಿಸ್ ಇಂದು ಮಲ್ಹೋತ್ರಾ ಅವರ ದ್ವಿ ಸದಸ್ಯ ನ್ಯಾಯಪೀಠವು ತಿರುವಾಂಕೂರು ರಾಜಮನೆತನದ ಪರವಾಗಿ ತೀರ್ಪು ನೀಡಿತು. ದೇವಾಲಯದ ನಿರ್ವಹಣೆಯನ್ನು ತಿರುವಾಂಕೂರು ರಾಜವಂಶಕ್ಕೆ ವಹಿಸಿತು. ಸದ್ಯದ ಮಟ್ಟಿಗೆ ಮಧ್ಯಂತರ ಸಮಿತಿಯನ್ನು ರಚಿಸಲು ಸುಪ್ರೀಂ ಸೂಚಿಸಿದೆ. ತಿರುವನಂತಪುರ ಜಿಲ್ಲಾ ನ್ಯಾಯಾಧೀಶರು ಈ ಸಮಿತಿಯ ನೇತೃತ್ವ ವಹಿಸಲಿದ್ದಾರೆ. ಹೊಸ ಸಮಿತಿ ರಚನೆಯಾಗುವವರೆಗೂ ಮಧ್ಯಂತರ ಸಮಿತಿ ದೇವಸ್ಥಾನದ ವ್ಯವಹಾರವನ್ನು ನೋಡಿಕೊಳ್ಳಲಿದೆ.
ವಿವಾದವೇನು?
18ನೇ ಶತಮಾನದಲ್ಲಿ ತಿರುವಾಂಕೂರು ರಾಜಮನೆತನದವರು ನಿರ್ಮಿಸಿದ್ದ ದೇಗುಲವನ್ನು ಸ್ವಾತಂತ್ರ್ಯಾನಂತರವೂ ರಾಜಮನೆತನದವರೇ ಟ್ರಸ್ಟ್ ರಚಿಸಿಕೊಂಡು ನೋಡಿಕೊಳ್ಳುತ್ತಿದ್ದರು. ಆದರೆ ದೇಗುಲದ ನಿರ್ವಹಣೆಗೆ ಪ್ರತ್ಯೇಕ ಟ್ರಸ್ಟ್ ರಚಿಸಿ, ದೇಗುಲ ವಶಕ್ಕೆ ಪಡೆಯಬೇಕೆಂದು 2011ರ ಜನವರಿ 31ರಂದು ಕೇರಳ ಹೈಕೋರ್ಟ್ ತೀರ್ಪು ನೀಡಿತ್ತು.