ಕರ್ನಾಟಕ

karnataka

ETV Bharat / bharat

ಪಾಕಿಸ್ತಾನಕ್ಕೆ ಕಾಶ್ಮೀರ್​ ಸೇರಬೇಕೆಂದು ಸರ್ದಾರ್​ ಪಟೇಲ್​​​​ ಬಯಸಿದ್ದರು: ಕಪಿಲ್​ ಸಿಬಲ್​ ಬಾಂಬ್​​

ಪಾಕಿಸ್ತಾನಕ್ಕೆ ಕಾಶ್ಮೀರ್​ ಹೋಗಬೇಕೆಂದು ಸರ್ದಾರ್​ ವಲ್ಲಭ್​ಬಾಯ್​ ಪಟೇಲ್​ ಬಯಸಿದ್ದರು ಎಂದು ಕಾಂಗ್ರೆಸ್​​ನ ಹಿರಿಯ ಮುಖಂಡ ಕಪಿಲ್​ ಸಿಬಲ್​ ಹೇಳಿಕೆ ನೀಡಿದ್ದಾರೆ.

ಕಪಿಲ್​ ಸಿಬಲ್​, ಮಾಜಿ ಸಚಿವ

By

Published : Aug 5, 2019, 7:42 PM IST

ನವದೆಹಲಿ:ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ ಆರ್ಟಿಕಲ್​ 370 ರದ್ದುಗೊಂಡಿದ್ದು, ಈಗಾಗಲೇ ಲೋಕಸಭೆಯಲ್ಲಿ ಬಿಲ್ ಪಾಸ್​ ಆಗಿದೆ. ಇದರ ಮೇಲಿನ ಚರ್ಚೆ ವೇಳೆ ಮಾಜಿ ಸಚಿವ ಹಾಗೂ ಕಾಂಗ್ರೆಸ್​ ಮುಖಂಡ ಕಪಿಲ್​ ಸಿಬಲ್​​ ವಿವಾದಿತ ಹೇಳಿಕೆವೊಂದನ್ನ ನೀಡಿದ್ದಾರೆ.

ಈ ಹಿಂದೆ ಆರ್ಟಿಕಲ್​ 370 ಪರಿಚಯ ಮಾಡಿದ್ದೇ ಮಾಜಿ ಉಪಪ್ರಧಾನಿಯಾಗಿದ್ದ ಸರ್ದಾರ್​ ವಲ್ಲಭ್​ಬಾಯ್​ ಪಟೇಲ್​ ಎಂದು ಹೇಳಿಕೆ ನೀಡಿರುವ ಅವರು, ಪಾಕಿಸ್ತಾನಕ್ಕೆ ಕಾಶ್ಮೀರ ಹೋಗಬೇಕೆಂದು ಕೂಡ ಬಯಸಿದ್ದರು ಎಂದಿದ್ದಾರೆ. ಆದರೆ ಜವಾಹರ್​ ಲಾಲ್​ ನೆಹರು ಅವರು ತೆಗೆದುಕೊಂಡ ನಿರ್ಧಾರದಿಂದ ಕಾಶ್ಮೀರ್ ಭಾರತದ ಅವಿಭಾಜ್ಯ ಅಂಗವಾಗಿ ಉಳ್ಳಿದುಕೊಳ್ಳುವಂತೆ ಆಯಿತು ಎಂದು ತಿಳಿಸಿದರು.

ಜಮ್ಮು-ಕಾಶ್ಮೀರದ ಜುನಾಗಢ್​ ರಾಜ ಮುಸ್ಲಿಂ ಆಗಿದ್ದ ಕಾರಣ, ಜಮ್ಮು-ಕಾಶ್ಮೀರ ಪಾಕ್​ಗೆ ಹೋಗಬೇಕೆಂದು ಅವರು ಬಯಸಿದ್ದರು. ಆದರೆ ಕಾಶ್ಮೀರ್​ ಹಿಂದೂಗಳಿಂದ ಕೂಡಿದ್ದ ಕಾರಣ ನೆಹರು ಅದನ್ನ ಬಿಟ್ಟುಕೊಟ್ಟಿರಲಿಲ್ಲ ಎಂದು ಹೇಳಿದ್ದರು.

ಇದೇ ವಿಷಯವಾಗಿ ಮಾಹಿತಿ ನೀಡುತ್ತಿದ್ದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಪಿಲ್​ ಸಿಬಲ್​ಗೆ ಟಾಂಗ್​ ನೀಡಿದರು. ಕಣಿವೆ ನಾಡಿನಲ್ಲಿ ಈ ಹಿಂದೆ ಆರ್ಟಿಕಲ್​ 370 ವಿಧಿ ಜಾರಿಗೊಳಿಸಿದ್ದೇ ಪಂಡಿತ್​ ಜವಾಹರ್​ಲಾಲ್​ ನೆಹರು. ವಲ್ಲಭ್​ಬಾಯ್​ ಪಟೇಲ್​​ ಅವರು ತಮ್ಮ ಅಧಿಕಾರ ಅವಧಿಯಲ್ಲೇ ಕಣಿವೆ ನಾಡಿನ ಅಭಿವೃದ್ಧಿಗೆ ಮಹತ್ವದ ನಿರ್ಧಾರ ಕೈಗೊಂಡಿದ್ದರು ಎಂದು ತಿಳಿಸಿದರು.​

ABOUT THE AUTHOR

...view details