ನವದೆಹಲಿ: ದೇಶದ ಪ್ರಖ್ಯಾತ ಹಿರಿಯ ಹಿನ್ನೆಲೆ ಗಾಯಕಿಭಾರತ ರತ್ನ ಲತಾ ಮಂಗೇಶ್ಕರ್ ಅವರಿಗಿಂದು 90ನೇ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಶುಭಾಶಯ ಕೋರಿದ್ದಾರೆ.
ಟ್ವೀಟ್ ಮೂಲಕ ಶುಭ ಕೋರಿರುವ ಸಚಿನ್, 90ನೇ ಹುಟ್ಟುಹಬ್ಬದ ಶುಭಾಶಯಗಳು ಸಹೋದರಿ. ನಿಮಗೆ ದೇವರು ಆರೋಗ್ಯ, ಸಂತೋಷ ನೀಡಲಿ ಎಂದು ಹಾರೈಸಿದ್ದಾರೆ.
ಈ ಕುರಿತು ವಿಡಿಯೋ ಹಂಚಿಕೊಂಡಿರುವ ತೆಂಡೂಲ್ಕರ್, ನಾನು ಯಾವಾಗ ಮೊದಲ ಬಾರಿಗೆ ನಿಮ್ಮ ಹಾಡುಗಳನ್ನು ಆಲಿಸಲು ಶುರು ಮಾಡಿದೆ ಎಂಬುದು ನನಗೆ ನೆನಪಿಲ್ಲ. ಆದರೆ ನಿಮ್ಮ ಹಾಡುಗಳನ್ನು ಕೇಳದ ದಿನಗಳೇ ಇರಲಿಲ್ಲ. ನಿಮ್ಮ ಆಶೀರ್ವಾದ ಸದಾ ನನ್ನ ಮೇಲಿತ್ತು. ನೀವು ನನಗೆಂದು 'ತು ಜಹಾ ಜಹಾ ಚಲೇಗಾ' ಹಾಡನ್ನು ಬರೆದು ನನಗೆಂದು ಗಿಫ್ಟ್ ಆಗಿ ನೀಡಿದ ಕ್ಷಣವು ಇನ್ನೂ ಕೂಡ ನನ್ನ ಮನದಲ್ಲಿ ಹಚ್ಚಹಸಿರಾಗಿದೆ. ನಿಮಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಹೇಳಿದ್ದಾರೆ.
ಲತಾ ಮಂಗೇಶ್ಕರ್ 1929ರ ಸೆ 28ರಂದು ಜನಿಸಿದ್ದು, ಸಂಗೀತ ಕ್ಷೇತ್ರಕ್ಕೆ ನೀಡಿದ ವಿಶಿಷ್ಟ ಕೊಡುಗೆಯನ್ನು ಪರಿಗಣಿಸಿ 2001ರಲ್ಲಿ ಕೇಂದ್ರ ಸರ್ಕಾರ ಅವರಿಗೆ 'ಭಾರತ ರತ್ನ' ಪ್ರಶಸ್ತಿ ನೀಡಿ ಗೌರವಿಸಿದೆ.