ಮಾಸ್ಕೋ (ರಷ್ಯಾ): ಸ್ಪುಟ್ನಿಕ್-ವಿ ಲಸಿಕೆಯನ್ನು ಭಾರತದಲ್ಲಿ 100 ಮಂದಿ ಮೇಲೆ ಪ್ರಯೋಗಿಸಲಾಗುವುದು ಎಂದು ಭಾರತೀಯ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್‌ನ ಡ್ರಗ್ ಕಂಟ್ರೋಲರ್ ಜನರಲ್ (ಡಿಸಿಜಿಐ), ಸ್ಪುಟ್ನಿಕ್ಗೆ ತಿಳಿಸಿದೆ.
ಪರೀಕ್ಷೆಗಳನ್ನು ನಡೆಸಲು ಡಿಸಿಜಿಐ, ಡಾ. ರೆಡ್ಡಿ ಅವರ ಪ್ರಯೋಗಾಲಯಗಳಿಗೆ ಅನುಮತಿ ನೀಡಿದೆ. ಆದಾಗ್ಯೂ ಪರೀಕ್ಷೆಯ ದಿನಾಂಕ ಮತ್ತು ಸಮಯವನ್ನು ಕಂಪನಿಯು ನಿರ್ಧರಿಸುತ್ತದೆ. 3ನೇ ಹಂತಕ್ಕೆ ಮೊದಲು ಲಸಿಕೆಯನ್ನು ತನ್ನ ಕ್ಲಿನಿಕಲ್ ಪ್ರಯೋಗಗಳ ಎರಡನೇ ಹಂತದಲ್ಲಿ ಪರೀಕ್ಷಿಸಲಾಗುವುದು ಎಂದು ಸ್ಪುಟ್ನಿಕ್ ಸಂಸ್ಥೆ ಉಲ್ಲೇಖಿಸಿದೆ.
ರಷ್ಯಾದ ಕೋವಿಡ್-19 ಲಸಿಕೆ ಸ್ಪುಟ್ನಿಕ್-ವಿ ಭಾರತದಲ್ಲಿ ಹಂತ 2 ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಕಳೆದ ವಾರ ಡಿಸಿಜಿಐ ತಜ್ಞರ ಸಮಿತಿಯು ಡಾ. ರೆಡ್ಡಿ ಅವರ ಪ್ರಯೋಗಾಲಯಗಳಿಗೆ ಅನುಮತಿ ನೀಡುವಂತೆ ಶಿಫಾರಸು ಮಾಡಿತ್ತು. ಸರ್ಕಾರಿ ಅಧಿಕಾರಿಯೊಬ್ಬರ ಪ್ರಕಾರ, ಡಾ. ರೆಡ್ಡಿ ಲ್ಯಾಬ್ನಲ್ಲಿ ಮೂರನೇ ಹಂತದ ಪರೀಕ್ಷೆಯಲ್ಲಿ 100 ಮಂದಿ ಭಾಗವಹಿಸಲಿದ್ದಾರಂತೆ.
"ಫಾರ್ಮಾ ಕಂಪನಿಯು 2ನೇ ಹಂತದ ಸುರಕ್ಷತೆ ಮತ್ತು ಇಮ್ಯುನೊಜೆನೆಸಿಟಿ ಡೇಟಾವನ್ನು ಸಲ್ಲಿಸಿದ ನಂತರ ಅದನ್ನು ತಜ್ಞರ ಸಮಿತಿಯು ವಿಶ್ಲೇಷಿಸುತ್ತದೆ ಮತ್ತು ನಂತರ ಅವರು 3ನೇ ಹಂತದ ಪರೀಕ್ಷೆಗೆ ಮುಂದುವರಿಯಬಹುದು" ಎಂದು ಅಧಿಕಾರಿ ಹೇಳಿದ್ದಾರೆ.