ಕರ್ನಾಟಕ

karnataka

ETV Bharat / bharat

ದುಷ್ಕರ್ಮಿಗಳ ಅಟ್ಟಹಾಸ: ಆರ್​​ಎಸ್​ಎಸ್​​​​ ಕಾರ್ಯಕರ್ತ, ಹೆಂಡ್ತಿ, ಮಗನ ಬರ್ಬರ ಕೊಲೆ! - ಆರ್​​ಎಸ್​ಎಸ್​ ಕಾರ್ಯಕರ್ತ

ಪಶ್ಚಿಮ ಬಂಗಾಳದಲ್ಲಿ ದುಷ್ಕರ್ಮಿಗಳ ಗುಂಪೊಂದು ಅಟ್ಟಹಾಸ ಮೆರೆದಿದ್ದು, ಮನೆಯಲ್ಲೇ ಆರ್​ಎಸ್​ಎಸ್​ ಕಾರ್ಯಕರ್ತ ಹಾಗೂ ಆತನ ಪತ್ನಿ ಮತ್ತು ಆರು ವರ್ಷದ ಮಗುವನ್ನ ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಆರ್​​ಎಸ್​ಎಸ್​ ಕಾರ್ಯಕರ್ತ,ಪತ್ನಿ

By

Published : Oct 10, 2019, 5:43 PM IST

ಕೋಲ್ಕತ್ತಾ:ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ, ಎಂಟು ತಿಂಗಳ ಆತನ ಗರ್ಭಿಣಿ ಹೆಂಡ್ತಿ ಹಾಗೂ ಆರು ವರ್ಷದ ಮಗುವನ್ನ ಭೀಕರವಾಗಿ ಕೊಲೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್​​ನಲ್ಲಿ ನಡೆದಿದೆ.

35 ವರ್ಷದ ಪ್ರಕಾಶ್​ ಪಾಲ್​, 28 ವರ್ಷದ ಹೆಂಡತಿ ಬ್ಯುಟಿ ಪಾಲ್​ ಹಾಗೂ ಆರು ವರ್ಷದ ಮಗ ಅಂಗನ್ ಪಾಲ್ ಮೃತ ದುರ್ದೈವಿಗಳಾಗಿದ್ದಾರೆ. ಮೂವರ ಮೃತದೇಹಗಳು ಮನೆಯಲ್ಲಿ ಸಿಕ್ಕಿದ್ದು, ಇವರ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಯಾವ ಕಾರಣಕ್ಕಾಗಿ ಇವರ ಕೊಲೆ ಮಾಡಲಾಗಿದೆ ಎಂಬುದರ ಕುರಿತು ಇಲ್ಲಿಯವರೆಗೆ ಯಾವುದೇ ರೀತಿಯ ಮಾಹಿತಿ ಲಭ್ಯವಾಗಿಲ್ಲ.

ವೃತ್ತಿಯಲ್ಲಿ ಶಿಕ್ಷಕನಾಗಿ ಪ್ರಕಾಶ್​ ಕೆಲಸ ಮಾಡಿಕೊಂಡಿದ್ದರು. ಆರ್​ಎಸ್​ಎಸ್​ನಲ್ಲಿ ಗುರುತಿಸಿಕೊಂಡಿದ್ದ ಇವರನ್ನು ಮುರ್ಷಿದಾಬಾದ್​ನ ಜಿಯಾಗಂಜ್​ ಬಡಾವಣೆಯಲ್ಲಿರುವ ಮನೆಯೊಳಗೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ABOUT THE AUTHOR

...view details