ಕರ್ನಾಟಕ

karnataka

By

Published : Jan 17, 2020, 6:19 PM IST

ETV Bharat / bharat

ಸಚಿನ್​, ಆಮ್ಲಾ ಹಿಂದಿಕ್ಕಿ ವಿಶ್ವದಾಖಲೆ ಬರೆದ ಹಿಟ್​​ಮ್ಯಾನ್​ ರೋಹಿತ್!

ಟೀಂ ಇಂಡಿಯಾದ ಆರಂಭಿಕ ಆಟಗಾರ ರೋಹಿತ್​ ಶರ್ಮಾ ಮತ್ತೊಂದು ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಮಾಸ್ಟರ್​ ಬ್ಲಾಸ್ಟರ್​​ ಸಚಿನ್​ ತೆಂಡೂಲ್ಕರ್​ ಹಾಗೂ ಹಾಶೀಂ ಆಮ್ಲಾ ರೆಕಾರ್ಡ್​ ಬ್ರೇಕ್​ ಮಾಡಿದ್ದಾರೆ.

Rohit Sharma
ರೋಹಿತ್​ ಶರ್ಮಾ ದಾಖಲೆ

ರಾಜ್​ಕೋಟ್​​:ಟೀಂ ಇಂಡಿಯಾದ ಹಿಟ್​ಮ್ಯಾನ್​ ಖ್ಯಾತಿಯ ಪ್ಲೇಯರ್​ ರೋಹಿತ್​ ಶರ್ಮಾ ಇದೀಗ ರಾಜ್​ಕೋಟ್​​ನಲ್ಲಿ ನಡೆದ ಪಂದ್ಯದಲ್ಲಿ 42 ರನ್​ ಗಳಿಸಿ ಮಾಡುವ ಮೂಲಕ ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡೂಲ್ಕರ್​ ಹಾಗೂ ಹಾಶೀಂ ಆಮ್ಲಾ ಹಿಂದಿಕ್ಕಿ ವಿಶ್ವದಾಖಲೆ ಬರೆದರು.

ಆರಂಭಿಕರಾಗಿ ಕಣಕ್ಕಿಳಿಯುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಅತಿ ಕಡಿಮೆ ಇನ್ನಿಂಗ್ಸ್​​ನಲ್ಲಿ 7 ಸಾವಿರ ರನ್​ ಪೂರೈಸುವ ದಾಖಲೆ ಇದೀಗ ರೋಹಿತ್​ ಶರ್ಮಾ ಪಾಲಾಗಿದ್ದು, ಕೇವಲ 137 ಇನ್ನಿಂಗ್ಸ್​​ ಮೂಲಕ ಈ ಸಾಧನೆ ಮಾಡಿದ್ದಾರೆ.

ಈ ಹಿಂದೆ ಟೀಂ ಇಂಡಿಯಾ ಆರಂಭಿಕ ಸಚಿನ್​ ತೆಂಡೂಲ್ಕರ್​​​ 160 ಇನ್ನಿಂಗ್ಸ್​​ನಲ್ಲಿ, ದಕ್ಷಿಣ ಆಫ್ರಿಕಾದ ಹಾಶೀಂ ಆಮ್ಲಾ 147 ಇನ್ನಿಂಗ್ಸ್​​ನಲ್ಲಿ ಈ ದಾಖಲೆ ಬರೆದಿದ್ದರು. ಇದರ ಜತೆಗೆ 7 ಸಾವಿರ ರನ್​ ಪೂರೈಸಿರುವ ಭಾರತೀಯ 4ನೇ ಆರಂಭಿಕ ಆಟಗಾರನೆಂಬ ದಾಖಲೆ ಸಹ ರೋಹಿತ್​ ಪಾಲಾಗಿದೆ. ಈಗಾಗಲೇ ತೆಂಡೂಲ್ಕರ್​, ಸೌರವ್​ ಗಂಗೂಲಿ ಹಾಗೂ ವೀರೇಂದ್ರ ಸೆಹ್ವಾಗ್​ ಈ ದಾಖಲೆ ಮಾಡಿದ್ದರು.

ಕೇವಲ 4 ರನ್​ನಿಂದ ಮತ್ತೊಂದು ದಾಖಲೆ ಮಿಸ್​:
ಮುಂಬೈ ಮೈದಾನದಲ್ಲಿ ಕಳಪೆ ರನ್​ಗಳಿಸಿ ವಿಕೆಟ್​ ಒಪ್ಪಿಸಿದ್ದ ರೋಹಿತ್​ ಶರ್ಮಾ, ಇಂದಿನ ಪಂದ್ಯದಲ್ಲಿ ಉತ್ತಮ ಆರಂಭ ಪಡೆದುಕೊಂಡರು. ಆದರೆ 42ರನ್​ ಮಾಡಿದ್ದ ವೇಳೆ ಜಂಪಾ ಓವರ್​​ನಲ್ಲಿ ವಿಕೆಟ್​ ಒಪ್ಪಿಸಿದರು. ಒಂದು ವೇಳೆ ಅವರು 46ರನ್​ ಕಲೆ ಹಾಕಿದ್ದಿದ್ದರೆ ಏಕದಿನದಲ್ಲಿ 9 ಸಾವಿರ ರನ್​ ಸಾಧನೆಗೈದ ಶ್ರೇಯಕ್ಕೆ ಪಾಲುದಾರರಾಗುತ್ತಿದ್ದರು.

ABOUT THE AUTHOR

...view details