ಕರ್ನಾಟಕ

karnataka

ETV Bharat / bharat

ಟ್ರಕ್​​​-ಆಟೋ ಮಧ್ಯೆ ಡಿಕ್ಕಿ: ಮದುವೆಗೆ ಹೋದ 6 ಮಂದಿ ಮಸಣಕ್ಕೆ! - 6 ಮಂದಿ ಮಸಣಕ್ಕೆ

ಅಶೋಕನಗರ: ಮದುವೆಗೆಂದು ಆಟೋದಲ್ಲಿ ತೆರಳುತ್ತಿದ್ದ ಆರು ಜನರು ಯಮರೂಪಿ ಟ್ರಕ್​ಗೆ ಬಲಿಯಾಗಿರುವ ಘಟನೆ ಮಧ್ಯಪ್ರದೇಶದ ಅಶೋಕನಗರದಲ್ಲಿ ನಡೆದಿದೆ.

ನಜ್ಜಾಗಿರುವ ಆಟೋ...

By

Published : Feb 18, 2019, 1:25 PM IST

ಇಂದು ಇಲ್ಲಿನ ಕರಿಲಾ ದೇವಿಯ ದೇವಸ್ಥಾನದಲ್ಲಿ ಮದುವೆ ನಡೆಯುತ್ತಿತ್ತು. ಮದುವೆಗೆಂದು ತೇಜಿ ಗ್ರಾಮದಿಂದ ಆರು ಜನ ಆಟೋದಲ್ಲಿ ಪ್ರಯಾಣ ಬೆಳೆಸಿದ್ದರು. ಮಾರ್ಗ ಮಧ್ಯದಲ್ಲಿ ಎದುರುಗಡೆಯಿಂದ ಬಂದ ಟ್ರಕ್​ ಆಟೋಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಆರು ಜನರು ಸಾವನ್ನಪ್ಪಿದ್ದಾರೆ.

ನಜ್ಜಾಗಿರುವ ಆಟೋ...

ಅಪಘಾತ ಸಂಭವಿಸಿದ ಬಳಿಕ ಆರೋಪಿ ಚಾಲಕ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗೆ ಜಾಲ ಬೀಸಿದ್ದಾರೆ.

ABOUT THE AUTHOR

...view details