ಕರ್ನಾಟಕ

karnataka

ETV Bharat / bharat

ಒಟಿಟಿ ವೇದಿಕೆಯ ಉಗಮ: ಪ್ರತಿಭೆ-ಪಾರದರ್ಶಕ ವ್ಯವಸ್ಥೆಯ ಪುನರುತ್ಥಾನ - ವರ್ಗೀಸ್ ಪಿ ಅಬ್ರಹಾಂ

ಈ ಹೊಸ ತಂತ್ರಜ್ಞಾನದ ಬಳಕೆಯನ್ನು ಉತ್ತುಂಗಕ್ಕೇರಿಸಿದ ಮತ್ತು ಬಹುಶಃ ಅವರ ನಟನಾ ವೃತ್ತಿಜೀವನದ ಎರಡನೇ ಅವಿಭಾಜ್ಯ ಅಂಗವಾಗಿ ಬಳಸುತ್ತಿರುವ ನಟರ ಪೈಕಿ ದೊಡ್ಡ ಹೆಸರು ನಟ ಸೈಫ್ ಅಲಿ ಖಾನ್ ಅವರದ್ದು. ಸೈಫ್ ಅಲಿ ಖಾನ್​ರ ಇತ್ತೀಚಿನ, ತಾಂಡವ್ ಮತ್ತು ಸೇಕ್ರೆಡ್ ಗೇಮ್ಸ್ ವೆಬ್‌ ಸಿರೀಸ್‌ಗಳು ದೊಡ್ಡ ಮಟ್ಟದ ವಿವಾದವನ್ನು ಭಾರತದಲ್ಲಿ ಸೃಷ್ಟಿಸಿದೆ. ಆದರೆ ಈ ಎರಡೂ ವೆಬ್‌ ಸಿರೀಸ್‌ಗಳು ಆಧುನಿಕ ಜಗತ್ತಿಗೆ ತೆರೆದುಕೊಂಡ ಭಾರತೀಯ ಪ್ರೇಕ್ಷಕರಿಗೆ ಹೊಸ ಬಗೆಯ ನಿರೂಪಣೆಯಲ್ಲಿ ಕತೆಯನ್ನು ಹೇಳುತ್ತಿವೆ.

Abraham
Abraham

By

Published : Feb 5, 2021, 3:14 PM IST

ಮನೋರಂಜನಾ ಉದ್ಯಮದ ಪ್ರಮುಖ ಭಾಗ ಬೆಳ್ಳಿ ತೆರೆ. ಬೆಳ್ಳಿತೆರೆಯಲ್ಲಿ ಮಿಂಚುವ ಕನಸು ಕಾಣದವರಿಲ್ಲ. ಆ ಕನಸುಗಳು ನಾನಾ ಬಣ್ಣಗಳ ಕಾಮನಬಿಲ್ಲಿನಂತೆ. ಬೆಳ್ಳಿತೆರೆಯಲ್ಲಿ ಮೂಡಿ ಬಂದ ಸಹಸ್ರಾರು ಪಾತ್ರಗಳಿಗೆ ಸಾವಿಲ್ಲ. ಅವುಗಳು ಸದಾ ನೋಡುಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವಂತದ್ದು. ಆ ಪಾತ್ರಗಳನ್ನು ನಿರ್ವಹಿಸಿದ ನಟ-ನಟಿಯರು ಜನರ ಮನಸ್ಸಿನ ಅಜರಾಮರರಾಗಿದ್ದಾರೆ. ಇಂತಹ ಪಾತ್ರಗಳು ನಮ್ಮ ಸಮಾಜ, ಬದುಕನ್ನು ಸದಾ ಪ್ರೇರೆಪಿಸುತ್ತಿರುವಂತದ್ದು.

ಬೆಳ್ಳಿತೆರೆ ಈಗ ಸಣ್ಣ ಪೆಟ್ಟಿಗೆಯೊಳಗೆ ಬಂಧಿಯಾಗಿದೆ. ನಟ-ನಟಿಯರು ಇಂದು ಟಿವಿ ಮೂಲಕ ಮನೆ-ಮನ ಹೊಕ್ಕಿದ್ದಾರೆ. ನಿಗದಿತ ಸಮಯದಲ್ಲಿ ಅವರ ಛಾಪು ಈಗ ಎಲ್ಲೆಡೆ ಬೀಳುತ್ತಿದೆ. ಊಟದ ಟೇಬಲ್‌ ಮೇಲೂ ಇವರ ಇರುವಿಕೆ ಸಾಧ್ಯವಾಗಿದೆ. ಆಂಟೆನಾ-ಡಿಶ್‌ ತಿರುಗಿಸುವ ಕಾಲ ಮುಗಿದು, ಬರೀ ಒಂದು ರಿಮೋಟ್‌ ಕಂಟ್ರೋಲ್‌ನ ಗುಂಡಿಯೊಳಗೆ ಮನೋರಂಜನೆ ಭದ್ರವಾಗಿದೆ.

ಟಿವಿ, ಬೆಳ್ಳಿತೆರೆಗಳು ಈಗ ಇನ್ನೊಂದು ಮಗ್ಗುಲಿಗೆ ತೆರೆದುಕೊಂಡಿವೆ. ಅವೆಂದರೆ, ಓವರ್-ದಿ-ಟಾಪ್ (ಒಟಿಟಿ) ಮಾಧ್ಯಮದೊಂದಿಗೆ ಮನರಂಜನೆಯ ಇನ್ನೊಂದು ಘಟ್ಟ ಆರಂಭವಾಗಿದೆ. ಇದು ಬೆಳ್ಳಿತೆರೆಯನ್ನು ಹಿಂದಿಕ್ಕಿ, ಅದಕ್ಕಿಂತ ಮಿಗಿಲಾದ ಅನುಭವ ನೀಡುವ ಎಲ್ಲಾ ಸಾಧ್ಯತೆಗಳೂ ಹೊರ ಹೊಮ್ಮುತ್ತಿವೆ. ಒಟಿಟಿಯ ವೈಶಿಷ್ಟ್ಯತೆಯೆಂದರೆ, ಇದು ಪ್ರೇಕ್ಷಕರ ಇಚ್ಛೆಯ ಮನೋಭೂಮಿಕೆಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತದೆ. ಇದರಿಂದಾಗಿ ಬೆಳ್ಳೆ ತೆರೆ ಇತಿಹಾಸ ತಲುಪಿದರೂ ಆಶ್ಚರ್ಯವಿಲ್ಲ. ಇದರ ಜೊತೆಗೆ, ಹೊಸ ಮನೋರಂಜನಾ ಲೋಕವೊಂದು ತೆರೆದುಕೊಳ್ಳುತ್ತಿದೆ. ಟಿವಿಯ ಜಾಗವನ್ನೂ ಇದು ಅತಿಕ್ರಮಿಸುತ್ತಿದೆ. ಇದರ ಜೊತೆಗೆ ನಟರ ವರ್ಗೀಕರಣ ಮತ್ತು ಅವರ ಪ್ರಭಾವ, ಹೀಗೆ ಎಲ್ಲವುಗಳಲ್ಲಿಯೂ ಸಾಕಷ್ಟು ಬದಲಾವಣೆಗಳು ಉಂಟಾಗುವ ಸಾಧ್ಯತೆಗಳಿವೆ. ಇದರ ಜೊತೆಗೆ, ಕುತೂಹಲಕಾರಿ ಸಂಗತಿಯೆಂದರೆ, ಹಿಂದಿನ ಅನೇಕ ನಟರು ಈ ಒಟಿಟಿ ಪ್ಲಾಟ್‌ಫಾರ್ಮ್‌ಗಳ ಮೂಲಕ ತಮ್ಮ ವೃತ್ತಿಜೀವನದ ಪುನರುಜ್ಜೀವನವನ್ನು ಕಂಡಿದ್ದಾರೆ. ಉದ್ಯಮದಲ್ಲಿನ ಸ್ಪರ್ಧೆಯ ಬಿರುಗಾಳಿಯಲ್ಲಿ ಮರೆಯಾದ ಈ ನಟರಿಗೆ ಬಣ್ಣದ ಜಗತ್ತಿನಲ್ಲಿ ಹೊಸ ಸ್ಥಾನಮಾನ ಸಿಗುತ್ತಿದೆ. ಹೊಸ ಬಗೆಯ ಮನೋರಂಜನಾ ಕ್ಷೇತ್ರವೊಂದು ಭಾರತದಲ್ಲಿ ರೂಪುಗೊಳ್ಳುತ್ತಿದೆ.

ಈ ಹೊಸ ತಂತ್ರಜ್ಞಾನದ ಬಳಕೆಯನ್ನು ಉತ್ತುಂಗಕ್ಕೇರಿಸಿದ ಮತ್ತು ಬಹುಶಃ ಅವರ ನಟನಾ ವೃತ್ತಿಜೀವನದ ಎರಡನೇ ಅವಿಭಾಜ್ಯ ಅಂಗವಾಗಿ ಬಳಸುತ್ತಿರುವ ನಟರ ಪೈಕಿ ದೊಡ್ಡ ಹೆಸರು ನಟ ಸೈಫ್ ಅಲಿ ಖಾನ್ ಅವರದ್ದು. ಸೈಫ್ ಅಲಿ ಖಾನ್​ರ ಇತ್ತೀಚಿನ, ತಾಂಡವ್ ಮತ್ತು ಸೇಕ್ರೆಡ್ ಗೇಮ್ಸ್ ವೆಬ್‌ ಸಿರೀಸ್‌ಗಳು ದೊಡ್ಡ ಮಟ್ಟದ ವಿವಾದವನ್ನು ಭಾರತದಲ್ಲಿ ಸೃಷ್ಟಿಸಿದೆ. ಆದರೆ ಈ ಎರಡೂ ವೆಬ್‌ ಸಿರೀಸ್‌ಗಳು ಆಧುನಿಕ ಜಗತ್ತಿಗೆ ತೆರೆದುಕೊಂಡ ಭಾರತೀಯ ಪ್ರೇಕ್ಷಕರಿಗೆ ಹೊಸ ಬಗೆಯ ನಿರೂಪಣೆಯಲ್ಲಿ ಕತೆಯನ್ನು ಹೇಳುತ್ತಿವೆ. ಅತ್ತೆ-ಸೊಸೆ ಯುಗದಿಂದ ಬಹುದೂರ ಸಾಗಿ ಬಂದಿರುವ ಈ ಪ್ರೇಕ್ಷಕ ವರ್ಗಕ್ಕೆ ಇವುಗಳು ಹೊಸ ಅನುಭವ ನೀಡಿವೆ.

90 ರ ದಶಕದಲ್ಲಿ ಅತ್ತೆ- ಸೊಸೆ ಕತೆ ಮೆಚ್ಚುತ್ತಿದ್ದ ಪ್ರೇಕ್ಷಕರಿದ್ದರು. ಆದರೆ ಅವರ ಸಂಖ್ಯೆ 2000 ರಲ್ಲಿ ಕ್ಷೀಣಿಸಿತು, ಆದರೆ ಈಗ ಭಾರತೀಯ ಪ್ರೇಕ್ಷಕರು ಮತ್ತಷ್ಟು ವಿಕಸನಗೊಂಡಿದ್ದಾರೆ ಮತ್ತು ಹೊಸ ಬಗೆಯ ಕಥೆ ಹೇಳುವ ಶೈಲಿಗಳನ್ನು ಹುಡುಕುತ್ತಿದ್ದಾರೆ. ದೇಶದ ಬಹುಭಾಗದಲ್ಲಿರುವ ಗ್ರಾಮೀಣ ಪ್ರೇಕ್ಷಕರು ಕೂಡಾ ಇದೇ ಪರಿವರ್ತನೆಯಲ್ಲಿದ್ದಾರೆ ಮತ್ತು ನಗರ ಪ್ರೇಕ್ಷಕರು ಹೊಸ ಸಹಸ್ರಮಾನ ಮತ್ತು ನಂತರದ ಕಥೆಗಳನ್ನು ತಮ್ಮ ಮನೆಗಳಲ್ಲೇ ನೋಡ ಬಯಸುತ್ತಾರೆ. ಅವರು ತಮ್ಮ ಮನೋರಂಜನೆಯಲ್ಲಿ ವಾಸ್ತವಿಕತೆಯನ್ನು ಬಯಸುತ್ತಾರೆ. ಅವರಲ್ಲಿ ಹೆಚ್ಚಿನವರು ಈ ಹಿಂದಿನಂತೆ ಪರಿಪೂರ್ಣ ಕಥೆಯನ್ನು ಬಯಸುವುದಿಲ್ಲ. ಬದಲಿಗೆ ಅವರು ತಮ್ಮ ನಾಯಕ ದೋಷಪೂರಿತ, ನೈಸರ್ಗಿಕ ಮತ್ತು ಮಾನವನಾಗಿರಲು ಬಯಸುತ್ತಾರೆ. ಆ ನಾಯಕ, ಹಾಗೂ ಇತರ ಪಾತ್ರಗಳೊಂದಿಗೆ ತಮ್ಮನ್ನು ಹೋಲಿಸಿಕೊಳ್ಳುತ್ತಾರೆ. ನೈಜ ಜಗತ್ತಿನ ನೈಜ ಸಮಸ್ಯೆಗಳೊಂದಿಗೆ ಹೋರಾಡುವ ಪಾತ್ರಗಳು ಅವರಿಗೆ ಇಷ್ಟವಾಗುತ್ತವೆ. ಮನೋಜ್ ಬಾಜ್‌ಪೈ ಅವರ ಫ್ಯಾಮಿಲಿ ಮ್ಯಾನ್ ಒಂದು ಅಹಿತಕರ ರಹಸ್ಯ ಏಜೆಂಟರ ಕಥೆಯನ್ನು ಹೇಳುತ್ತದೆ, ಅದೇ ಸಮಯದಲ್ಲಿ ಭಾರತೀಯ ಮಧ್ಯಮ ವರ್ಗದ ಮನುಷ್ಯನ ಸವಾಲುಗಳನ್ನು ಅದು ಹೇಳುತ್ತಾ ಹೋಗುತ್ತದೆ. ಸುಶ್ಮಿತಾ ಸೇನ್ ಮತ್ತು ಚಂದ್ರ ಸಿಂಗ್ ಅವರ ಆರ್ಯ ಅಪರಾಧದ ಜಗತ್ತಿನಲ್ಲಿ ಪ್ರವೇಶಿಸುವ ಸಾಮಾನ್ಯ ಭಾರತೀಯ ಕುಟುಂಬದ ಸುತ್ತ
ಸುತ್ತುತ್ತದೆ ಮತ್ತು ಅದನ್ನು ಪ್ರಾಬಲ್ಯ ಸಾಧಿಸುತ್ತದೆ. ಬಾಬಿ ಡಿಯೋಲ್ ಅವರ ಆಶ್ರಮವು ಒಂದು ಸಂಕೀರ್ಣವಾದ ನಿರೂಪಣೆಯಾಗಿದೆ.

ಅನ್‌ಗ್ಲಾಮರಸ್ ರಿಯಾಲಿಟಿ ಪಾತ್ರಗಳು ನೋಡುಗರಿಗೆ ದೊಡ್ಡ ಮಟ್ಟದಲ್ಲಿ ಮುಟ್ಟುತ್ತವೆ ಎಂಬುದನ್ನು ಈ ವೆಬ್‌ ಸಿರೀಸ್‌ಗಳು ಖಚಿತಪಡಿಸಿವೆ. 500 ಕೋಟಿ ರೂಪಾಯಿಗಳ ಬಜೆಟ್‌ ಚಿತ್ರಗಳಲ್ಲಿನ ನಟರಿಗಿಂತ ಉತ್ತಮ ನಟನೆಯ ಕಲಾವಿದರು ಇಲ್ಲಿ ಕಾಣ ಸಿಗುತ್ತಾರೆ. ಅವರು ಹೊಸ ಬಗೆಯ ಕತೆಯನ್ನು ಅನ್ವೇಷಿಸುತ್ತಾರೆ. ವೆಬ್‌ಸಿರೀಸ್‌ಗಳು ಕೇವಲ ಎರಡೂವರೆ ಗಂಟೆಯ ಚಿತ್ರಗಳಿಗಿಂತ ಹೆಚ್ಚಿನ ಅವಕಾಶವನ್ನು ಅವರಿಗೆ ಒದಗಿಸುತ್ತದೆ. ಅವರು, ಧಾರವಾಹಿ ಅಥವಾ ಸಿನಿಮಾಗಳ ಸೀಮಿತತೆಯನ್ನು ಮೀರಿ ಬೆಳೆಯಲು ಇದು ಅವಕಾಶ ಒದಗಿಸುತ್ತದೆ.

ಅಸಂಪ್ರದಾಯಿಕ ನಿರೂಪಣೆಗಳನ್ನು ಅನ್ವೇಷಿಸುವ ಮತ್ತು ಧ್ವನಿ ನೀಡುವ ಒಟಿಟಿ ಪ್ಲಾಟ್‌ಫಾರ್ಮ್-ಚಾಲಿತ ವೆಬ್ ಸರಣಿಗಳಲ್ಲಿ ಹಲವಾರು ನಟರ ಪುನರುತ್ಥಾನವು ಈಗ ಸರ್ಕಾರ ಕೆಂಗಣ್ಣಿಗೆ ಗುರಿಯಾಗಿದೆ. ಈ ಪ್ಲ್ಯಾಟ್‌ಫಾರ್ಮ್‌ಗಳನ್ನು ಒಂದು ರೀತಿಯ ನಿಯಂತ್ರಕ ವ್ಯವಸ್ಥೆಯಡಿ ತರಲು ಸರ್ಕಾರ ಪ್ರಯತ್ನಿಸುತ್ತಿದೆ. ಅದು ಇನ್ನೂ ಒಟಿಟಿ ಪ್ಲಾಟ್‌ಫಾರ್ಮ್‌ನಂತೆ ಅದರ ವ್ಯಾಪ್ತಿಯಲ್ಲಿ ವ್ಯಾಖ್ಯಾನಿಸಲ್ಪಟ್ಟಿಲ್ಲ. ಈ ನಡುವೆ,ಈ ಒಟಿಟಿ ಫ್ಲ್ಯಾಟ್‌ಫಾರ್ಮ್‌ಗಳೆಂಬ ಅವಕಾಶಗಳ ವಿಶಾಲ ಆಗಸದಲ್ಲಿ ಒಂದಿಷ್ಟು ಬದಲಾವಣೆಗಳು ಕಾಣಿಸಲಾರರಂಭಿಸಿದೆ. ಬಣ್ಣ ಮಾಸಿದ ಬಳಿಕವೂ, ಕೆಲವು ಕಲಾವಿದರಿಗೆ, ತಮ್ಮ ನಟನಾ ಸಾಮರ್ಥ್ಯ ಪ್ರದರ್ಶಿಸಲು ವೇದಿಕೆಯಾಗುತ್ತಿದೆ. ಮನೋರಂಜನಾ ಉದ್ಯಮವು ಸ್ವಜನಪಕ್ಷಪಾತಕ್ಕೆ ಗುರಿಯಾಗುವ ಹಾದಿಯಲ್ಲಿದ್ದಾಗ, ಇದು ಕಾರ್ಮೋಡದಲ್ಲಿನ ಬೆಳ್ಳಿಗೆರೆಯಂತೆ ತೋರುತ್ತಿದೆ.

ವರ್ಗೀಸ್ ಪಿ ಅಬ್ರಹಾಂ, ಈ ಟಿವಿ ಭಾರತ

ABOUT THE AUTHOR

...view details