ಕರ್ನಾಟಕ

karnataka

ETV Bharat / bharat

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಚೀನಾದಲ್ಲೂ ಇದೆ ಬ್ಯಾಂಕ್ ಖಾತೆ..!

ಡೊನಾಲ್ಡ್ ಟ್ರಂಪ್ ಚೀನಾದಲ್ಲಿ ಬ್ಯಾಂಕ್​ ಖಾತೆಯನ್ನು ಹೊಂದಿದ್ದು, ಈ ಖಾತೆ ಟ್ರಂಪ್ ಇಂಟರ್​ನ್ಯಾಷನಲ್ ಹೋಟೆಲ್ಸ್​ ಮ್ಯಾನೇಜ್​ಮೆಂಟ್ ನಿಯಂತ್ರಣಕ್ಕೆ ಒಳಪಟ್ಟಿದೆ ಎಂದು ದ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

Trump
ಡೊನಾಲ್ಡ್​ ಟ್ರಂಪ್​

By

Published : Oct 21, 2020, 6:31 PM IST

ವಾಷಿಂಗ್ಟನ್ :ಅಮೆರಿಕದ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಚೀನಾದಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿದ್ದಾರೆ ಎಂದು ದ ನ್ಯೂಯಾರ್ಕ್ ಟೈಮ್ಸ್ ಮಂಗಳವಾರ ವರದಿ ಮಾಡಿದೆ.

ಕೇವಲ ಮೂರು ವಿದೇಶಗಳಲ್ಲಿ ಟ್ರಂಪ್ ಬ್ಯಾಂಕ್ ಖಾತೆಯನ್ನು ಹೊಂದಿದ್ದಾರೆ. ಬ್ರಿಟನ್, ಐರ್ಲೆಂಡ್ ಹಾಗೂ ಚೀನಾದಲ್ಲಿ ಖಾತೆಯನ್ನು ಹೊಂದಿದ್ದು ಚೀನಾದಲ್ಲಿರುವ ಖಾತೆಯನ್ನು ಟ್ರಂಪ್ ಇಂಟರ್​ನ್ಯಾಷನಲ್ ಹೋಟೆಲ್ಸ್​ ಮ್ಯಾನೇಜ್​ಮೆಂಟ್ ನಿಯಂತ್ರಣಕ್ಕೆ ಒಳಪಟ್ಟಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸುಮಾರು ವರ್ಷಗಳ ಕಾಲ ಡೊನಾಲ್ಡ್ ಟ್ರಂಪ್ ಚೀನಾದಲ್ಲಿ ಕೆಲವೊಂದು ಪ್ರಾಜೆಕ್ಟ್​ಗಳನ್ನು ನಿರ್ವಹಿಸಿದ್ದು, ಅವುಗಳು ವಿಫಲವಾಗಿದ್ದವು. ಜೊತೆಗೆ ಚೀನಾ ಸರ್ಕಾರದ ಪಾಲುದಾರಿಕೆಯಲ್ಲಿ ಕಚೇರಿಯೊಂದನ್ನು ನಡೆಸುತ್ತಿದ್ದರು ಎಂದು ನ್ಯೂಯಾರ್ಕ್​ ಟೈಮ್ಸ್ ಮಾಹಿತಿ ನೀಡಿದೆ.

ಟ್ರಂಪ್ ಅವರ ತೆರಿಗೆ ದಾಖಲೆಗಳನ್ನು ದಿ ಟೈಮ್ಸ್ ಪತ್ರಿಕೆ ಪರಿಶೀಲನೆ ನಡೆಸಿದಾಗ ಮಾಹಿತಿ ಹೊರಬಿದ್ದಿದ್ದು, 2013 ಹಾಗೂ 2015ರ ಅವಧಿಯಲ್ಲಿ ಪರವಾನಗಿ ವ್ಯವಹಾರಗಳ ವೇಳೆ ಸುಮಾರು 1,88,561 ಅಮೆರಿಕನ್ ಡಾಲರ್​ಗಳನ್ನು ತೆರಿಗೆಯಾಗಿ ಪಾವತಿಸಿದ್ದಾರೆ ಎಂದು ಗೊತ್ತಾಗಿದೆ.

ಟೈಮ್ಸ್ ಪ್ರಶ್ನೆಗೆ ಉತ್ತರಿಸಿರುವ ಟ್ರಂಪ್ ಆರ್ಗನೈಸೇಷನ್ ವಕೀಲ ಅಲನ್ ಗಾರ್ಟನ್ ಸ್ಥಳೀಯ ತೆರಿಗೆಗಳನ್ನು ಪಾವತಿಸುವ ಸಲುವಾಗಿ ಚೀನಾದ ಬ್ಯಾಂಕ್​​ನಲ್ಲಿ ಖಾತೆ ತೆರೆಯಲಾಗಿದೆ. ಏಷ್ಯಾ ಭಾಗದಲ್ಲಿ ಹೋಟೆಲ್​​ಗಳನ್ನ ತೆರೆಯುವ ಸುಲುವಾಗಿ ಚೀನಾದಲ್ಲಿ ಕಚೇರಿಯನ್ನು ಸ್ಥಾಪಿಸಲಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.

ಇದರ ಜೊತೆಗೆ 2015ರಿಂದ ಚೀನಾದೊಂದಿಗೆ ಯಾವುದೇ ವ್ಯವಹಾರ ನಡೆಸುತ್ತಿಲ್ಲ. ಅಲ್ಲಿನ ಕಚೇರಿ ನಿಷ್ಕ್ರಿಯಗೊಂಡಿದೆ. ಈಗಲೂ ಬ್ಯಾಂಕ್ ಖಾತೆ ಇದ್ದರೂ ಅದನ್ನು ಬಳಸುತ್ತಿಲ್ಲ ಎಂದು ಅಲನ್ ಗಾರ್ಟನ್ ಅವರು ಟೈಮ್ಸ್​ಗೆ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details