ಹೈದರಾಬಾದ್:ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಠಮಿಯ ಶುಭಾಶಯ ಕೋರಿದ್ದಾರೆ.
ದೇಶದ ಜನತೆಗೆ ಕೃಷ್ಣ ಜನ್ಮಾಷ್ಠಮಿಯ ಶುಭಾಶಯ ತಿಳಿಸಿದ ರಾಷ್ಟ್ರಪತಿ ಹಾಗೂ ಪ್ರಧಾನಿ.. - Modi
ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವಿಟರ್ ಮೂಲಕ ದೇಶದ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಠಮಿಯ ಶುಭಾಶಯ ಕೋರಿದ್ದಾರೆ.
ರಾಮ್ನಾಥ್ ಕೋವಿಂದ್ - ನರೇಂದ್ರ ಮೋದಿ
ಟ್ವಿಟರ್ ಮೂಕ ಶುಭಾಶಯ ತಿಳಿಸಿರುವ ಪ್ರಧಾನಿ ಮೋದಿ, ಶ್ರೀ ಕೃಷ್ಣನ ಆಶೀರ್ವಾದ ಯಾವಾಗಲೂ ನಮ್ಮ ಜೀವನದಲ್ಲಿ ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ತರಲಿ ಎಂದು ಹಾರೈಸಿದ್ದಾರೆ.
ಇನ್ನೊಂದೆಡೆ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್, ಕೃಷ್ಣನ ಅಪಾರ ಬೋಧನೆಗಳನ್ನು ನಾವು ಅನುಸರಿಸಿಕೊಂಡು ಜೀವಿಸುತ್ತಿದ್ದೇವೆ. ಈ ದಿನ ನಮ್ಮೆಲ್ಲರಿಗೂ ಸಂಭ್ರಮ ಹಾಗೂ ಆಚರಣೆ ತುಂಬಿದ ಸಂತೋಷದಾಯಕ ದಿನವಾಗಿರಲಿ ಎಂದು ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ.