ಕರ್ನಾಟಕ

karnataka

By

Published : Sep 20, 2020, 5:37 PM IST

ETV Bharat / bharat

ಮೇಲ್ಮನೆಯಲ್ಲಿ 'ಕೃಷಿ ಗದ್ದಲ': ವೆಂಕಯ್ಯ ನಾಯ್ಡು ನಿವಾಸದಲ್ಲಿ ಉನ್ನತಮಟ್ಟದ ಸಭೆ

ಬಹುಚರ್ಚಿತ ಹಾಗೂ ವಿವಾದಾತ್ಮಕ ಕೃಷಿ ಸಂಬಂಧಿ ಮಸೂದೆಗಳ ಮಂಡನೆ ವೇಳೆ ಗದ್ದಲ ಸೃಷ್ಟಿಸಿದ ಸಂಸದರ ವಿರುದ್ಧ ಉಪರಾಷ್ಟ್ರಪತಿಗಳು ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ruckus in rajyasabha
ಕೃಷಿ ಮಸೂದೆಗಳ ಮಂಡನೆ ವೇಳೆ ಗದ್ದಲ

ನವದೆಹಲಿ:ರಾಜ್ಯಸಭೆಯಲ್ಲಿ ಕೃಷಿ ಸಂಬಂಧಿ ಮಸೂದೆಗಳನ್ನು ಮಂಡಿಸುವ ವೇಳೆ ಪ್ರತಿಪಕ್ಷಗಳ ಕೆಲವು ಸದಸ್ಯರು ಗದ್ದಲ ಸೃಷ್ಟಿಸಿದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮುಂದಾಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ಹಿನ್ನೆಲೆಯಲ್ಲಿ ವೆಂಕಯ್ಯ ನಾಯ್ಡು ನಿವಾಸದಲ್ಲಿ ಉನ್ನತ ಮಟ್ಟದ ಸಭೆ ನಡೆದಿದ್ದು, ರಾಜ್ಯಸಭೆಯ ಡೆಪ್ಯುಟಿ ಚೇರ್ಮನ್ ಹರಿವಂಶ್, ಕೇಂದ್ರ ಸಚಿವ ಪಿಯೂಷ್ ಗೋಯಲ್ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್​ ಜೋಶಿ ಸಭೆಯಲ್ಲಿ ಭಾಗಿಯಾಗಿದ್ದಾರೆ.

ಪ್ರತಿಪಕ್ಷಗಳ ಗದ್ದಲದ ನಡುವೆ ಎರಡು ಕೃಷಿ ಮಸೂದೆಗಳನ್ನು ರಾಜ್ಯಸಭೆ ಅಂಗೀಕರಿಸಿದೆ. ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ- 2020 ಹಾಗೂ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆಗಳನ್ನು ಧ್ವನಿ ಮತದಿಂದ ಅಂಗೀಕಾರ ಮಾಡಲಾಗಿದೆ.

ಮಸೂದೆ ಅಂಗೀಕಾರ ಮಾಡುವ ವೇಳೆ ತೃಣಮೂಲ ಕಾಂಗ್ರೆಸ್​ನ ಸಂಸದ ಡೆರೇಕ್ ಓ ಬ್ರಿಯಾನ್, ಕಾಂಗ್ರೆಸ್ ಸಂಸದ ರಿಪುನ್ ಬೋರಾ, ಆಪ್ ಸಂಸದ ಸಂಜಯ್ ಸಿಂಗ್, ಡಿಎಂಕೆ ಸಂಸದ ತಿರುಚಿ ಶಿವ ಹಾಗೂ ಹಲವರು ಡೆಪ್ಯುಟಿ ಚೇರ್ಮನ್ ಹರಿವಂಶ್​​​ ಅವರ ಬಳಿಯಿದ್ದ ಪೋಡಿಯಂನ ಮೈಕ್ ಕಿತ್ತುಕೊಳ್ಳಲು ಯತ್ನಿಸಿದರು. ಇದರ ಜೊತೆಗೆ ಹಾಳೆಗಳನ್ನು ಹರಿದು ಉಪಾರಾಷ್ಟ್ರಪತಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ಇದಾದ ನಂತರ 10 ನಿಮಿಷಗಳ ಕಾಲ ರಾಜ್ಯಸಭೆ ಕಲಾಪ ಸ್ಥಗಿತಗೊಳಿಸಿದ ನಂತರ ಧ್ವನಿಮತದ ಮೂಲಕ ಎರಡು ಕೃಷಿ ಮಸೂದೆಗಳನ್ನು ಅಂಗೀಕಾರ ಮಾಡಲಾಯಿತು.

ಘಟನೆಯಿಂದಾಗಿ ಉಪ ರಾಷ್ಟ್ರಪತಿಗಳು ನೊಂದಿದ್ದು, ಗದ್ದಲ ಸೃಷ್ಟಿಸಿದ ಸಂಸದರ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಬಿಜೆಪಿ ನಾಐಕರು ಕೂಡಾ ಈ ಘಟನೆಯಿಂದ ನೊಂದು ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ABOUT THE AUTHOR

...view details