ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ನಿಂದಿಸಿ ಮಾತನಾಡುವುದು ಪರಮ ಹೇಡಿತನದ ಸಂಕೇತ ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭಾ ಸದಸ್ಯ ಅಹಮದ್ ಪಟೇಲ್ ಎಂದು ಹೇಳಿದರು.
ರಾಜೀವ್ ಬಗ್ಗೆ ಅವಹೇಳನವಾಗಿ ಮಾತನಾಡುವುದು ಹೇಡಿತನ: ಅಹಮದ್ ಪಟೇಲ್ - Kannada news
ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಪರಮ ಹೇಡಿತನದ ಸಂಕೇತ ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭಾ ಸದಸ್ಯ ಅಹಮದ್ ಪಟೇಲ್ ಅಭಿಪ್ರಾಯಪಟ್ಟರು.
ಅಹಮದ್ ಪಟೇಲ್
ಚುನಾವಣಾ ಪ್ರಚಾರದ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಜೀವ್ ಗಾಂಧಿಯವರು ಭ್ರಚ್ಟಾಚಾರಿ ನಂಬರ್ 1 ಎಂದು ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಪಟೇಲ್ ಪರೋಕ್ಷವಾಗಿ ಮೋದಿಯವರನ್ನು ಜರೆದಿದ್ದಾರೆ.
ಇದೇ ವೇಳೆ, ಅವರು ರಾಹುಲ್ ಗಾಂಧಿ ಹತ್ಯೆಗೆ ಕಾರಣರಾಗಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ. ಆ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ವಿ.ಪಿ.ಸಿಂಗ್ ಸರ್ಕಾರವಿತ್ತು. ರಾಜೀವ್ ಅವರಿಗೆ ಹೆಚ್ಚಿನ ಭದ್ರತೆ ಅವಶ್ಯಕತೆ ಇರುವ ಬಗ್ಗೆ ಸಂಪೂರ್ಣವಾದ ಮಾಹಿತಿ ಇದ್ದರೂ ಕೂಡಾ ಬಿಜೆಪಿ ಬೆಂಬಲದೊಂದಿಗೆ ಆಗಿನ ಸರ್ಕಾರ ಹೆಚ್ಚುವರಿ ಸೆಕ್ಯುರಿಟಿ ನೀಡಲಿಲ್ಲ ಎಂದು ಆರೋಪಿಸಿದರು.
Last Updated : May 9, 2019, 4:35 PM IST