ನವದೆಹಲಿ :ಸಿದ್ದಪಡಿಸಿದ ಆಹಾರವನ್ನು ಅಗತ್ಯವಿರುವವರಿಗೆ ವಿತರಿಸಲು ಮುಂದಾಗುವ ರಾಜ್ಯಗಳಿಗೆ ತನ್ನ ಅಡುಗೆ ಮನೆಗಳಿಂದ ಪ್ರತಿನಿತ್ಯ 2.6 ಲಕ್ಷ ಜನರಿಗೆ ಆಹಾರ ತಯಾರಿಸಿಕೊಡುವುದಾಗಿ ಭಾರತೀಯ ರೈಲ್ವೆ ತಿಳಿಸಿದೆ.
ಸಂಕಷ್ಟದ ನಡುವೆ ಆಶಾಕಿರಣ: ನಿತ್ಯ 2.6 ಲಕ್ಷ ಜನರಿಗೆ ಆಹಾರ ತಯಾರಿಸಿ ಕೊಡಲು ಸಿದ್ದ ಎಂದ ಭಾರತೀಯ ರೈಲ್ವೆ
ಲಾಕ್ ಡೌನ್ ವೇಳೆ ಸಂಕಷ್ಟದಲ್ಲಿರುವ ಜನರಿಗೆ ಆಹಾರ ವಿತರಿಸಲು ಸಿದ್ದವಿರುವುದಾದರೆ ಪ್ರತಿನಿತ್ಯ ಸುಮಾರು 2.6 ಲಕ್ಷ ಜನರಿಗಾಗುವಷ್ಟುಆಹಾರ ತಯಾರಿಸಿಕೊಡಲು ಸಿದ್ದವಿರುವುದಾಗಿ ಭಾರತೀಯ ರೈಲ್ವೆ ಜಿಲ್ಲಾಡಳಿತಗಳಿಗೆ ತಿಳಿಸಿದೆ.
ಈ ಬಗ್ಗೆ ಜಿಲ್ಲಾಡಳಿತಗಳಿಗೆ ಮಾಹಿತಿ ನೀಡಲಾಗಿದೆ. ಎಲ್ಲಾ ರೈಲ್ವೆ ವಲಯಗಳ ಅಡುಗೆ ಮನೆಗಳ ವಿವರವನ್ನೂ ನೀಡಲಾಗಿದೆ. ಸದ್ಯ ಅಡುಗೆ ಮನೆಗಳ ಸಾಮಾರ್ಥ್ಯವನ್ನು ಆಧರಿಸಿ 2.6 ಲಕ್ಷ ಜನರಿಗೆ ಆಹಾರ ಒದಗಿಸಲು ಸಿದ್ದವಿದ್ದೇವೆ. ಹೆಚ್ಚಿನ ಬೇಡಿಕೆ ಬಂದರೆ, ಅಂತಹ ಸ್ಥಳಗಳಲ್ಲಿ ಸೂಕ್ತ ವ್ಯವಸ್ಥೆ ಮಾಡುತ್ತೇವೆ. ಒಂದು ಊಟಕ್ಕೆ ಕೇವಲ ಹದಿನೈದು ರೂಪಾಯಿ ದರ ನಿಗದಿಪಡಿಸಲಾಗಿದೆ. ಆ ಹಣವನ್ನು ರಾಜ್ಯ ಸರ್ಕಾರಗಳಿಂದ ಪಡೆಯಲಿದ್ದೇವೆ ಎಂದು ರೈಲ್ವೆ ಹೇಳಿದೆ.
ಹೆಚ್ಚಿನ ಆಹಾರ ಅಗತ್ಯವಿದ್ದರೆ, ರಾಜ್ಯ ಸರ್ಕಾರಗಳು ಹೆಚ್ಚುವರಿ ಹಣ ಕೊಡಬೇಕಾಗುತ್ತದೆ. ಬೇಡಿಕೆಗೆ ಅನುಗುಣವಾಗಿ ಆಹಾರ ವಿತರಿಸಲು ಸಿದ್ದವಿರುವುದಾಗಿ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (ಐಆರ್ಸಿಟಿಸಿ) ತಿಳಿಸಿದೆ. ಸದ್ಯ, ಭಾರತೀಯ ರೈಲ್ವೆ ಪ್ರತಿದಿನ ಒಂದು ಲಕ್ಷ ಜನರಿಗೆ ಆಹಾರ ವಿತರಿಸುತ್ತಿದೆ.