ಗುವಾಹಟಿ:ಅಸ್ಸೋಂನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರಿಗೆ ರಾಹುಲ್ ಗಾಂಧಿ ಅಂತಿಮ ನಮನ ಸಲ್ಲಿಸಿದರು.
ತರುಣ್ ಗೊಗೊಯ್ ನಿಧನ: ಗುವಾಹಟಿಗೆ ತೆರಳಿ ರಾಹುಲ್ ಗಾಂಧಿ ಅಂತಿಮ ನಮನ - Rahul Gandhi pays homage to tarun Gogoi
ಅಸ್ಸೋಂ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ತರುಣ್ ಗೊಗೊಯ್ ನಿಧನ ಹಿನ್ನೆಲೆ ಅವರಿಗೆ ಅಂತಿಮ ನಮನ ಸಲ್ಲಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಸ್ಸೋಂನಲ್ಲಿದ್ದಾರೆ.
ತರುಣ್ ಗೊಗೊಯ್ ನಿಧನ
ರಾಹುಲ್ ಎರಡು ಗಂಟೆಗಳ ಕಾಲ ಅಸ್ಸೋಂನಲ್ಲಿರಲಿದ್ದು, ಡಿಸ್ಪುರದಲ್ಲಿರುವ ಗೊಗೊಯ್ ಅವರ ನಿವಾಸಕ್ಕೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿರುವ ಅವರು, ಶ್ರೀಮಂತ ಶಂಕರದೇವ ಕಲಾಕ್ಷೇತ್ರದಲ್ಲಿ ನಡೆಯುವ ತರುಣ್ ಗೊಗೊಯ್ ಅವರ ಅಂತಿಮ ಸಂಸ್ಕಾರದಲ್ಲೂ ಪಾಲ್ಗೊಳ್ಳಲಿದ್ದಾರೆ.
ಬಹು ಅಂಗಾಂಗ ವೈಫಲ್ಯಕ್ಕೆ ಒಳಗಾಗಿದ್ದ ತರುಣ್ ಗೊಗೊಯ್ ಅವರು ಕೋಮಾಕ್ಕೆ ಜಾರಿದ್ದರು. ನಂತರ ಚಿಕಿತ್ಸೆ ಫಲಕಾರಿಯಾಗದೇ ತರುಣ್ ಗೊಗೊಯ್ ಕೊನೆಯುಸಿರೆಳೆದರು.
Last Updated : Nov 25, 2020, 12:11 PM IST