ಹೈದರಾಬಾದ್ :ಕೊರೊನಾ ಹೆಮ್ಮಾರಿಯಿಂದ ಜಾಗತಿಕ ಆರ್ಥಿಕತೆಯಲ್ಲಿ ತಲ್ಲಣ ಸೃಷ್ಟಿಯಾಗಿದೆ. ಬೃಹತ್ ಕೈಗಾರಿಕಾ ಉತ್ಪಾದನೆಯಲ್ಲಿ ತೊಡಗಿಕೊಳ್ಳುತ್ತಿದ್ದ ಉದ್ಯಮಗಳೆಲ್ಲಾ ತಟಸ್ಥವಾಗಿವೆ. ವೈರಾಣುವಿನ ಹೊಡೆತಕ್ಕೆ ಮಂಕಾಗಿರುವ ಉದ್ಯಮಗಳು ಚೇತರಿಸಿಕೊಳ್ಳಲು ತುಂಬಾ ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ. ದಶಕದ ಹಿಂದೆ ಜಗತ್ತು ಕಂಡಿದ್ದ ಆರ್ಥಿಕ ಬಿಕ್ಕಟ್ಟು ಈ ಬಾರಿಯ ಆರ್ಥಿಕ ದುಸ್ಥಿತಿಯಿಂದ ಹೊರಬರಲು ಪಾಠವಾಗಲಿದೆ. ಆರ್ಥಿಕ ತಜ್ಞರ ಹೇಳಿಕೆಗಳ ಪ್ರಕಾರ 2020ರ ಮುಂದಿನ ತ್ರೈಮಾಸಿಕ ಗಂಭೀರವಾಗಿರಲಿದೆ. ಆರ್ಥಿಕ ಹಿನ್ನೆಡೆ ಜಗತ್ತಿನಾದ್ಯಂತ ಗಂಭೀರ ದುಷ್ಪರಿಣಾಮಗಳನ್ನು ಉಂಟು ಮಾಡಲಿದೆ.
ಐಎಂಎಫ್ ಹೇಳುವುದೇನು? :ಹಿಂದಿನ ವಾರ ಐಎಂಎಫ್ನ ವ್ಯವಸ್ಥಾಪಕ ನಿರ್ದೇಶಕ ಕ್ರಿಸ್ಟಲಿನಾ ಜಾರ್ಜಿವಾ ಜಾಗತಿಕ ಆರ್ಥಿಕತೆ ಈಗಾಗಲೇ ಗಂಭೀರ ಹಂತ ಪ್ರವೇಶಿಸಿದೆ ಎಂದಿದ್ದಾರೆ. ಈಗಿನ ಆರ್ಥಿಕ ದುಸ್ಥಿತಿ 2008ರ ಆರ್ಥಿಕ ಮುಗ್ಗಟ್ಟಿಗಿಂತ ಭೀಕರವಾಗಿರಲಿದೆ ಎಂದಿದ್ದಾರೆ. ಆದರೆ, ವಿಶ್ವಬ್ಯಾಂಕ್ ಜಗತ್ತಿನ ಕೆಲ ಕಡೆಗಳಿಂದ ಇಂತಹ ಯಾವುದೇ ಮುನ್ಸೂಚನೆ ಇನ್ನೂ ದೊರೆತಿಲ್ಲ ಎಂದು ಸ್ಪಷ್ಟಪಡಿಸಿದೆ.
2008ರ ಜಾಗತಿಕ ಆರ್ಥಿಕ ಮುಗ್ಗಟ್ಟಿನ ವೇಳೆ ಪ್ರಮುಖ ಬ್ಯಾಂಕ್ಗಳು ಬಡ್ಡಿದರವನ್ನು ಕಡಿಮೆ ಮಾಡಿವೆ. ಈ ಮೂಲಕ ಆರ್ಥಿಕತೆಯನ್ನು ಚೇತರಿಸಿಕೊಳ್ಳಲು ಪ್ರಯತ್ನ ನಡೆಸಿದ್ದವು. ಈ ವೇಳೆ ಜಿ-20 ಸಮೂಹ ಮುನ್ನೆಲೆಗೆ ಬಂದಿದ್ದು ಕೆಲ ರಾಷ್ಟ್ರಗಳಿಗೆ ಸಹಕಾರ ನೀಡಿತ್ತು. ಕೊರೊನಾ ಮಹಾಮಾರಿಯ ಹೊರತಾಗಿಯೂ ಕೆಲ ದೇಶಗಳು ಜಾಗತಿಕ ವ್ಯವಹಾರದಲ್ಲಿ ಸಂಕಷ್ಟಕ್ಕೀಡಾಗಲಿವೆ ಎನ್ನಲಾಗಿದೆ. ಜಾಗತಿಕ ನಾಯಕರು ಈಗಾಗಲೇ ಶಸ್ತ್ರಾಸ್ತ್ರ ವ್ಯವಹಾರ ನೀತಿ ನಿರ್ಲಕ್ಷಿಸಬೇಕಾದ ಅಗತ್ಯವಿದೆ. ಈ ಮೂಲಕ ಹಣಕಾಸು ಹಿನ್ನೆಡೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಬಹುದಾಗಿದೆ.
ವಿಶ್ವಬ್ಯಾಂಕ್ ಈಗಾಗಲೇ 14 ಬಿಲಿಯನ್ ಡಾಲರ್ ಫಾಸ್ಟ್ ಟ್ರ್ಯಾಕ್ ಪ್ಯಾಕೇಜ್‌ನ ಘೋಷಿಸಿ ಅಭಿವೃದ್ಧಿ ಶೀಲ ರಾಷ್ಟ್ರಗಳನ್ನು ಕೊರೊನಾ ಮಹಾಮಾರಿ ವಿರುದ್ಧ ಬಲಗೊಳಿಸಲು ಪ್ರಯತ್ನಿಸುತ್ತಿದೆ. ಮುಂದಿನ 15 ತಿಂಗಳಲ್ಲಿ ಬಿಲಿಯನ್ ಡಾಲರ್‌ನ ಜಾಗತಿಕ ಮಟ್ಟದಲ್ಲಿ ಹಣಕಾಸು ಸ್ಥಿತಿ ಚೇತರಿಕೆಗೆ ವ್ಯಯಿಸಲು ನಿರ್ಧಾರ ಮಾಡಲಾಗಿದೆ.
ಇನ್ನೊಂದೆಡೆ ಐಎಂಎಫ್ ಕೂಡಾ ಒಂದು ಟ್ರಿಲಿಯನ್ ಡಾಲರ್‌ನ ಆರ್ಥಿಕ ದುಸ್ಥಿತಿಯಲ್ಲಿರುವ ದೇಶಗಳಿಗೆ ನೀಡುವುದಾಗಿ ಹೇಳಿಕೊಂಡಿದೆ. ಯಾವುದೇ ಒಂದು ದೇಶ ಏಕಾಂಗಿಯಾಗಿ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವುದು ಸಾಧ್ಯವಿಲ್ಲ. ಪ್ರತ್ಯಕ್ಷ್ಯ ಹಾಗೂ ಪರೋಕ್ಷವಾಗಿ ಒಂದು ದೇಶ ಮತ್ತೊಂದು ದೇಶವನ್ನು ಅವಲಂಬಿಸಬೇಕಾದ ಪರಿಸ್ಥಿತಿಯಿದ್ದು ಜಾಗತಿಕ ಸಮಗ್ರತೆಯಿಂದ ಆರ್ಥಿಕತೆ ತಹಬದಿಗೆ ತರಬಹುದಾಗಿದೆ.