ಕರ್ನಾಟಕ

karnataka

ETV Bharat / bharat

ಅ.3ಕ್ಕೆ ಪ್ರಧಾನಿ ಮೋದಿ ಹಿಮಾಚಲ ಪ್ರವಾಸ.. ಲಹೌಲ್‌ ಕಣಿವೆಯಲ್ಲಿನ ಸೈನಿಕರ ಭೇಟಿ - ವಿಶ್ವದಲ್ಲೇ ಅತಿ ಎತ್ತರ ಸುರಂಗ

ಧಾನಿ ಮೋದಿ ಲಹೌಲ್‌ ಕಣಿವೆಯಲ್ಲಿ ಸೇನಾ ಶಿಬಿರಕ್ಕೆ ಭೇಟಿ ನೀಡುತ್ತಿರುವ ಸೈನಿಕರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಲಿದೆ. ಜೊತೆಗೆ ಇಲ್ಲಿಂದ ನೆರೆಯ ರಾಷ್ಟ್ರಗಳಿಗೆ ಬಲವಾದ ಸಂದೇಶ ರವಾನಿಸಲಿದ್ದಾರೆ..

prime-minister-narendra-modi-will-meet-army-jawan-on-lahaul-tour
ಅ.3ಕ್ಕೆ ಪ್ರಧಾನಿ ಮೋದಿ ಹಿಮಾಚಲ ಪ್ರವಾಸ; ಲಹೌಲ್‌ ಕಣಿವೆಯಲ್ಲಿನ ಸೈನಿಕರ ಭೇಟಿ

By

Published : Sep 28, 2020, 8:06 PM IST

ಮನಾಲಿ(ಹಿಮಾಚಲ ಪ್ರದೇಶ):ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್‌ 3ರಂದು ಹಿಮಾಚಲ ಪ್ರದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಇದೇ ವೇಳೆ ಲಹೌಲ್‌ ಕಣಿವೆಯಲ್ಲಿ ಸೇನಾ ಶಿಬಿರಕ್ಕೆ ಆಗಿಮಿಸಿ ಸೈನಿಕರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.

ಹಿಮಾಚಲ ಪ್ರದೇಶದಲ್ಲಿ ನಿರ್ಮಿಸಿರುವ ಅಟಲ್‌ ರೋಹ್ಟಾಂಗ್ ಸುರಂಗವನ್ನು ಪ್ರಧಾನಿ ಮೋದಿ ಮುಂದಿನ ಶನಿವಾರ ಲೋಕಾರ್ಪಣೆ ಮಾಡಲಿದ್ದಾರೆ. ‌10 ಸಾವಿರ ಅಡಿಗಳಷ್ಟು ಮೇಲಿದ್ದು, ವಿಶ್ವದಲ್ಲೇ ಅತಿ ದೊಡ್ಡ ಸುರಂಗವಾಗಿದೆ. ಪ್ರಧಾನಿ ಮೋದಿ ಲಹೌಲ್‌ ಕಣಿವೆಯಲ್ಲಿ ಸೇನಾ ಶಿಬಿರಕ್ಕೆ ಭೇಟಿ ನೀಡುತ್ತಿರುವ ಸೈನಿಕರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಲಿದೆ. ಜೊತೆಗೆ ಇಲ್ಲಿಂದ ನೆರೆಯ ರಾಷ್ಟ್ರಗಳಿಗೆ ಬಲವಾದ ಸಂದೇಶ ರವಾನಿಸಲಿದ್ದಾರೆ.

ಸೆಪ್ಟೆಂಬರ್‌ 25ರಂದು ರಕ್ಷಣಾ ಸಚಿವಾಲಯದ ಕಾರ್ಯದರ್ಶಿ ಅಜಯ್‌ ಕುಮಾರ್‌ ಸುರಂಗಕ್ಕೆ ಭೇಟಿ ನೀಡಿ ಗಡಿ ರಸ್ತೆ ನಿರ್ಮಾಣದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಸುರಂಗ ಸಂಬಂಧ ಎಲ್ಲಾ ರೀತಿಯ ಕಾಮಗಾರಿಗಳು ಮುಗಿದಿವೆ. ಉದ್ಘಾಟನೆಗೆ ಸಂಪೂರ್ಣ ಸಿದ್ಧವಿದೆ ಎಂದು ಸುರಂಗದ ಮುಖ್ಯ ಇಂಜಿನಿಯರ್‌ ಕೆ ಪಿ ಪುರುಷೋತ್ತಮನ್‌ ತಿಳಿಸಿದ್ದಾರೆ.

ABOUT THE AUTHOR

...view details