ಕರ್ನಾಟಕ

karnataka

By

Published : Nov 12, 2019, 9:11 PM IST

ETV Bharat / bharat

’ನಮಗೇನೂ ಅವಸರ ಇಲ್ಲ... ಎಲ್ಲ ಅಳೆದು ತೂಗಿ ಮುನ್ನುಗ್ಗುತ್ತೇವೆ’: ಪವಾರ್​ ಸ್ಪಷ್ಟನೆ

ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೇರಲು ಬಿಜೆಪಿ-ಶಿವಸೇನ ಮಧ್ಯೆ ನಡೆದ ಗುದ್ದಾಟ ರಾಷ್ಟ್ರಪತಿ ಆಳ್ವಿಕೆಗೆ ದಾರಿ ಮಾಡಿಕೊಟ್ಟಿದೆ. ಸರ್ಕಾರ ರಚನೆಗೆ ಎಲ್ಲಾ ಪಕ್ಷಗಳು ವಿಫಲವಾದ ಕಾರಣ ರಾಷ್ಟ್ರಪತಿ ಆಳ್ವಿಕೆ ಶಿಫಾರಸು ಮಾಡಿದ ರಾಜ್ಯಪಾಲರ ನಿರ್ಧಾರಕ್ಕೆ ರಾಷ್ಟ್ರಪತಿ ರಾಮ್​ನಾಥ್​ ಕೋವಿಂದ್​ ಅಸ್ತು ಎಂದಿದ್ದಾರೆ. ತಕ್ಷಣವೇ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ. ಇದು ಪ್ರತಿಪಕ್ಷಗಳ ಆಕ್ರೋಶಕ್ಕೂ ಕಾರಣವಾಗಿದೆ

ಮಹಾರಾಷ್ಟ್ರ ಸರ್ಕಾರ ರಚನೆ

ಮುಂಬೈ:ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ. ಕಳೆದ 19 ದಿನಗಳ ಕಾಲ ಮಹಾರಾಷ್ಟ್ರದಲ್ಲಿ ನಡೆದ ಹೈಡ್ರಾಮಾಕ್ಕೆ ಸಧ್ಯ ತಾತ್ಕಾಲಿಕ ತೆರೆ ಬಿದ್ದಿದೆ. ರಾಷ್ಟ್ರಪತಿ ಆಳ್ವಿಕೆ ಜಾರಿಯಾದ ಬೆನ್ನಲ್ಲೆ ಸಂಜೆ ಎನ್​​ಸಿಪಿ ಹಾಗೂ ಕಾಂಗ್ರೆಸ್ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿದರು.

ಈ ನಿರ್ಧಾರ ದುರದುಷ್ಟಕರ...
ರಾಷ್ಟ್ರಪತಿ ಆಳ್ವಿಕೆ ಹೇರಿರುವುದು ದುರದುಷ್ಟಕರ. ಆದಷ್ಟೂ ಬೇಗ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುತ್ತೇವೆ ಎಂದು ಮಾಜಿ ಸಿಎಂ ದೇವೇಂದ್ರ ಫಡ್ನವಿಸ್​​ ​ ಪತ್ರಿಕಾ ಪ್ರಕಟಣೆ ಮೂಲಕ ಹೇಳಿದ್ದಾರೆ.

ಬಿಜೆಪಿಯೇ ಸರ್ಕಾರ ರಚಿಸುತ್ತೆ: ರಾಣಾ ವಿಶ್ವಾಸ
ಮಾಜಿ ಸಿಎಂ ದೇವೇಂದ್ರ ಫಡ್ನವಿಸ್​​ ಮಾರ್ಗದರ್ಶನದಲ್ಲೇ ಬಿಜೆಪಿ ಸರ್ಕಾರ ರಚಿಸುತ್ತೆ. ಎನ್​ಸಿಪಿ-ಕಾಂಗ್ರೆಸ್​ ಪಕ್ಷಗಳು ಶಿವಸೇನೆಯನ್ನ ಮೂರ್ಖರನ್ನಾಗಿ ಮಾಡುತ್ತಿವೆ ಎಂದು ನನಗನ್ನಿಸುತ್ತಿದೆ ಎಂದು ಭಾರತೀಯ ಜನತಾ ಪಕ್ಷದ ನಾಯಕ ನಾರಾಯಣ​ ರಾಣೆ ಹೇಳಿದ್ದಾರೆ.

ಸಮಯ ನೀಡಲಿಲ್ಲ: ಸೇನೆ ಕೆಂಡಾಮಂಡಲ
ಶಿವಸೇನಾ - ಬಿಜೆಪಿ ಅನೇಕ ವರ್ಷಗಳಿಂದ ಕೂಡಿ ಸರ್ಕಾರ ರಚಿಸಿತ್ತು. ಆದ್ರೆ ಈಗ ಕಾಂಗ್ರೆಸ್​-ಎನ್​ಸಿಪಿ ಜೊತೆ ಸರ್ಕಾರ ರಚಿಸಲು ಶಿವಸೇನಾ ನಿರ್ಧಾರ ಕೈಗೊಂಡಿದೆ. ಸರ್ಕಾರ ರಚಿಸಲು ನಮಗೆ ಬೆಂಬಲ ಸೂಚಿಸುವಂತೆ ಕಾಂಗ್ರೆಸ್​-ಎನ್​ಸಿಪಿಗೆ ನಿನ್ನೆ ಮನವಿ ಮಾಡಿಕೊಳ್ಳಲಾಗಿತ್ತು. ನಮಗೆ ಸರ್ಕಾರ ರಚಿಸಲು 48 ಗಂಟೆಗಳ ಕಾಲಾವಕಾಶ ಬೇಕಿತ್ತು. ಆದ್ರೆ ರಾಜ್ಯಪಾಲರು ಸಮಯ ನೀಡಲಿಲ್ಲ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.

ನಮಗೇನು ಅವಸರವಿಲ್ಲ...
ನಮಗೆ ಅವರಸರವಿಲ್ಲ. ನಾವು ಕಾಂಗ್ರೆಸ್ ಜೊತೆ ಚರ್ಚೆ ನಡೆಸಿ ನಂತರ ಶಿವಸೇನೆಗೆ ಬೆಂಬಲ ಸೂಚಿಸುವುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಅಂತಾ ಎನ್​ಸಿಪಿ ಪಕ್ಷ ಅಧ್ಯಕ್ಷ ಶರಾದ್​ ಪವಾರ್​ ಸ್ಪಷ್ಟ ಪಡಿಸಿದ್ದಾರೆ.

ABOUT THE AUTHOR

...view details