ನವದೆಹಲಿ:ಪಾಕ್ ಆಕ್ರಮಿತ ಕಾಶ್ಮೀರ ಯಾವತ್ತಿಗೂ ಭಾರತದ ಅವಿಭಾಜ್ಯ ಅಂಗ. ದೇಶವು ಒಂದು ದಿನ ಪಿಒಕೆ ಮೇಲೆ ಅಧಿಕಾರದ ವ್ಯಾಪ್ತಿ ಹೊಂದುವ ಭರವಸೆ ಇದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ತಿಳಿಸಿದ್ದಾರೆ.
ಪಿಒಕೆ ನಮ್ಮದೇ: ಪಾಕ್ಗೆ ಎಚ್ಚರಿಕೆ ಸಂದೇಶ ರವಾನಿಸಿದ ಜೈಶಂಕರ್ - hope to have jurisdiction over it one day
ಪಿಒಕೆ ಎಂದೆಂದಿಗೂ ಭಾರತದ್ದೇ ಆಗಿರುತ್ತದೆ. ಒಂದು ವೇಳೆ ದೇಶದೊಂದಿಗೆ ಮಾತುಕತೆ ನಡೆಸುವುದಾದರೆ, ಅದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕುರಿತಂತೆಯೇ ಇರುತ್ತದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ತಿಳಿಸಿದ್ದಾರೆ.
ಜೈಶಂಕರ್
ದೆಹಲಿಯಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಿಒಕೆ ಎಂದೆಂದಿಗೂ ಭಾರತದ್ದೇ ಆಗಿರುತ್ತದೆ ಎಂದು ಸಚಿವರು ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.
ಒಂದು ವೇಳೆ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವುದಾದರೆ, ಅದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕುರಿತಾಗಿಯೇ ಇರುತ್ತದೆ ಎಂದು ಸಚಿವ ಜೈಶಂಕರ್ ಹೇಳಿದ್ದಾರೆ.