ಕರ್ನಾಟಕ

karnataka

ETV Bharat / bharat

ಪಾಕ್​ ಆಕ್ರಮಿತ ಕಾಶ್ಮೀರ ನಮ್ಮದು... ಪಾಕ್​ ವಿರುದ್ಧ ಗುಡುಗಿದ ಸೇನಾ ಮುಖ್ಯಸ್ಥ ​​

ಪಾಕ್​ ಆಕ್ರಮಿತ ಕಾಶ್ಮೀರ ಸಂಪೂರ್ಣವಾಗಿ ಉಗ್ರರ ಹಿಡಿತದಲ್ಲಿದ್ದು, ಅದರ ಮೇಲೆ ಅಲ್ಲಿನ ಸರ್ಕಾರ ಯಾವುದೇ ರೀತಿಯ ನಿಯಂತ್ರಣ ಪಡೆದುಕೊಂಡಿಲ್ಲ ಎಂದು ಸೇನಾ ಮುಖ್ಯಸ್ಥ ಬಿಪಿನ್​ ರಾವತ್​ ಹೇಳಿದ್ದಾರೆ.

ಬಿಪಿನ್ ರಾವತ್​,ಸೇನಾ ಮುಖ್ಯಸ್ಥ

By

Published : Oct 25, 2019, 7:34 PM IST

ನವದೆಹಲಿ:ಪಾಕ್​ ಆಕ್ರಮಿತ ಕಾಶ್ಮೀರ ಎಂದು ಕರೆಯಲ್ಪಡುವ ಪಿಒಕೆ ಇದೀಗ ಭಯೋತ್ಪಾದಕ ನಿಯಂತ್ರಣದ ಕಾಶ್ಮೀರವಾಗಿದೆ ಅದರ ಮೇಲೆ ಪಾಕ್​​ನ ನಿಯಂತ್ರಣ ಇಲ್ಲ ಎಂದು ಸೇನಾ ಮುಖ್ಯಸ್ಥ ಬಿಪಿನ್​ ರಾವತ್​ ಹೇಳಿದ್ದಾರೆ.

ನವದೆಹಲಿಯಲ್ಲಿ ಆಯೋಜನೆಗೊಂಡಿದ್ದ ಸೇನಾ ಕಮಾಂಡರ್​ಗಳ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಪಾಕ್​​ ಆಕ್ರಮಿತ ಕಾಶ್ಮೀರ ಇದೀಗ ಅಲ್ಲಿನ ಸರ್ಕಾರದ ನಿಯಂತ್ರಣದಲ್ಲಿ ಇಲ್ಲ. ಬದಲಾಗಿ ಸಂಪೂರ್ಣವಾಗಿ ಭಯೋತ್ಪಾದಕರು ಅದರ ಮೇಲೆ ಹಿಡಿತ ಸಾಧಿಸಿದೆ ಎಂದರು. ಯಾವುದೇ ಕಾರಣಕ್ಕೂ ಪಾಕ್​ ಆಕ್ರಮಿತ ಕಾಶ್ಮೀರ ಪಾಕಿಸ್ತಾನದ್ದಲ್ಲ ಅದು ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗ ಎಂದು ಹೇಳಿದ್ದಾರೆ.

ಬಿಪಿನ್ ರಾವತ್​,ಸೇನಾ ಮುಖ್ಯಸ್ಥ

ಜಮ್ಮು-ಕಾಶ್ಮೀರ ಎಂದಾಕ್ಷಣ ಸಂಪೂರ್ಣವಾಗಿ ಪಿಒಕೆ ಹಾಗೂ ಗಿಲ್ಗಿಟ್​ ಬಲ್ಟಿಸ್ಥಾನ್​ ಕೂಡ ಅದರೊಳಗೆ ಇದೆ ಎಂದಿದ್ದು, ಆದರೆ ಈ ಪ್ರದೇಶಗಳನ್ನ ಪಾಕ್​ ಅಕ್ರಮವಾಗಿ ವಶಪಡಿಸಿಕೊಂಡಿವೆ ಎಂದರು.

ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್​ 370 ರದ್ಧು ಮಾಡುತ್ತಿದ್ದಂತೆ ಪಾಕಿಸ್ತಾನ ವಿರೋಧ ಮಾಡಲು ಈ ಪ್ರದೇಶ ಅವರ ಹಿಡಿತದಲ್ಲಿರುವುದೇ ಕಾರಣ ಎಂದ ರಾವತ್​, ಈ ವರ್ಷದ ಅಂತ್ಯದ ವೇಳೆಗೆ ವಿಶ್ವದ ಅತ್ಯುತ್ತಮ ರೈಫಲ್​​ ಸಿಗ್​ ಸೌರ್ ಭಾರತೀಯ ಸೇನೆಗೆ ಸಿಗಲಿದೆ ಎಂದು ಭರವಸೆ ನೀಡಿದರು.

ABOUT THE AUTHOR

...view details