ನವದೆಹಲಿ:ಇಂದು ಬಿಜೆಪಿ ಸರ್ವೋನ್ನತ ನಾಯಕ, ಪಕ್ಷದ ಭೀಷ್ಮ ಎಂದೇ ಕರೆಯಿಸಿಕೊಳ್ಳುವ ಎಲ್. ಕೆ ಅಡ್ವಾಣಿಗೆ 92ನೇ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಪ್ರಧಾನಿ ಹಾಗೂ ಎಲ್ ಕೆ ಅಡ್ವಾಣಿ ಅವರ ಶಿಷ್ಯರೂ ಆಗಿರುವ ನರೇಂದ್ರ ಮೋದಿ, ಅವರ ನಿವಾಸಕ್ಕೆ ಭೇಟಿ ನೀಡಿ ಹುಟ್ಟುಹಬ್ಬದ ಶುಭಾಶಯ ಹೇಳಿದರು.
ಈ ವೇಳೆ, ಬಿಜೆಪಿ ಅಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್ ಶಾ, ಪಕ್ಷದ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಪ್ರಧಾನಿಯೊಂದಿಗೆ ಎಲ್ ಕೆ ಅಡ್ವಾಣಿ ಭೇಟಿ ಮಾಡಿ ಶುಭ ಕೋರಿದರು.
ಇದೇ ವೇಳೆ ಉಪರಾಷ್ಟ್ರಪತಿ ಸಹ ಹಾಜರಿದ್ದರು.