ನವದೆಹಲಿ:ದೇಶ ವಿದೇಶಗಳಿಗೆ ಭೀತಿ ಹುಟ್ಟಿಸಿರುವ ಚೀನಾದ ಡೆಡ್ಲಿ ಕೊರೊನಾ ವೈರಸ್ ಇದೀಗ ಭಾರತಕ್ಕೂ ಲಗ್ಗೆ ಹಾಕಿದ್ದು, ಕೆಲವೊಂದು ನಗರಗಳಲ್ಲಿ ಪ್ರಕರಣಗಳು ಕಂಡು ಬಂದಿವೆ. ಈ ಸೋಂಕಿನಿಂದ ಹೊರಗುಳಿಯಲು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಸಲಹೆ ನೀಡಿದ್ದಾರೆ.
ಕೊರೊನಾ: ಹೋಳಿಯಲ್ಲಿ ನಾನು ಭಾಗಿಯಾಗಲ್ಲ, ಮತ್ತೆ ನೀವೂ ಹೋಗಬೇಡಿ ಎಂದ ಮೋದಿ - ಮೋದಿ ಹೋಳಿ ಸಂಭ್ರಮ
ಕೊರೊನಾ ವೈರಸ್ ಭಾರತದಲ್ಲೂ ಲಗ್ಗೆಯಿಟ್ಟಿದ್ದು, ಕೆಲವೊಂದು ನಗರಗಳಲ್ಲಿ ಪ್ರಕರಣಗಳು ಕಂಡು ಬರುತ್ತಿವೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ
ಹೋಳಿ ಹಬ್ಬದ ಸಂಭ್ರಮದಲ್ಲಿರುವ ದೇಶದ ಜನರಿಗೆ ಪ್ರಧಾನಿ ಮೋದಿ ಮನವಿ ಮಾಡಿಕೊಂಡಿದ್ದು, ವೈರಸ್ ಹರಡುವುದನ್ನ ತಪ್ಪಿಸಲು ಸಾಮೂಹಿಕ ಸಭೆಗಳಲ್ಲಿ ಭಾಗಿಯಾಗುವುದನ್ನ ಕಡಿಮೆ ಮಾಡಲು ಈಗಾಗಲೇ ತಜ್ಞರು ಸಲಹೆ ನೀಡಿದ್ದು, ಈ ವರ್ಷದ ಹೋಳಿ ಮಿಲನ್ ಸಂಭ್ರಮದಲ್ಲಿ ನಾನು ಭಾಗವಹಿಸುತ್ತಿಲ್ಲ ಎಂದಿದ್ದಾರೆ. ತೆಲಂಗಾಣ ಹಾಗೂ ದೆಹಲಿಯಲ್ಲಿ ಕೊರೊನಾ ವೈರಸ್ ಪ್ರಕರಣ ಕಂಡ ಬರುತ್ತಿದ್ದಂತೆ ವಿವಿಧ ನಗರಗಳಲ್ಲಿ ಈ ಕೇಸ್ ಹೊರಬಂದಿದ್ದು, ಅವರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.