ನವದೆಹಲಿ:ಆರೋಗ್ಯಕರ ಭಾರತಕ್ಕಾಗಿ ಹೊಸದೊಂದು ಅಭಿಯಾನವನ್ನು ದೇಶದ ಜನತೆಗೆ ಪ್ರಧಾನಿ ಮೋದಿ ಪರಿಚಯಿಸಿದ್ದು, 'ಫಿಟ್ ಇಂಡಿಯಾ' ಎಂದು ಹೆಸರಿಸಿದ್ದಾರೆ.
ನವದೆಹಲಿಯ ಇಂದಿರಾಗಾಂಧಿ ಒಳ ಕ್ರೀಡಾಂಗಣದಲ್ಲಿ ಫಿಟ್ ಇಂಡಿಯಾ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಈ ಅಭಿಯಾನದಲ್ಲಿ ಎಲ್ಲ ವಯೋಮಾನದವರೂ ಪಾಲ್ಗೊಳ್ಳಬೇಕು ಎಂದು ಮೋದಿ ಕರೆ ನೀಡಿದ್ದಾರೆ.
ಫಿಟ್ನೆಸ್ ವಿಚಾರದಲ್ಲಿ ದೇಶದ ಜನತೆ ಸಾಕಷ್ಟು ಬದಲಾಗಿದ್ದಾರೆ. ಒಂದು ಕಾಲದಲ್ಲಿ ಸೈಕಲ್ ಹಾಗೂ ನಡಿಗೆಯ ಮೂಲಕ ಫಿಟ್ನೆಸ್ ಕಾಯ್ದುಕೊಳ್ಳುತ್ತಿದ್ದ ಮಂದಿ ಇದೀಗ ಸ್ಮಾರ್ಟ್ವಾಚ್ ಹಾಗೂ ಮೊಬೈಲ್ ಆ್ಯಪ್ ಮೂಲಕ ದಿನದ ನಡಿಗೆಯನ್ನು ಲೆಕ್ಕ ಹಾಕುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಫಿಟ್ ಇಂಡಿಯಾದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಭಾಷಣ ಬದಲಾದ ಜೀವನಶೈಲಿಯಿಂದ ಸಕ್ಕರೆ ಕಾಯಿಲೆ ಹಾಗೂ ಅಧಿಕ ರಕ್ತದೊತ್ತಡಗಳಂತಹ ಕಾಯಿಲೆಗಳು ಇದೀಗ ಸಣ್ಣ ವಯಸ್ಸಿನಲ್ಲೇ ಬಾಧಿಸುತ್ತಿವೆ ಎಂದು ಮೋದಿ ಆತಂಕ ವ್ಯಕ್ತಪಡಿಸಿದ್ದಾರೆ.
ಗೆಲುವಿಗೆ ಯಾವುದೇ ಎಲಿವೇಟರ್ಗಳಿಲ್ಲ, ಬದಲಾಗಿ ಮೆಟ್ಟಿಲುಗಳನ್ನು ಏರುತ್ತಲೇ ಸಾಧನೆಯ ಶಿಖರವೇರಬೇಕು ಎಂದು ಪ್ರಧಾನಿ ಮೋದಿ ದೇಶದ ಜನತೆಗೆ ಹೇಳಿದ್ದಾರೆ.
ಫಿಟ್ ಇಂಡಿಯಾ ಅಭಿಯಾನದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ಭಾಗಿಯಾಗಬೇಕು ಎಂದು ಮೋದಿ ಕರೆ ನೀಡಿದ್ದಾರೆ. ಫಿಟ್ ಇಂಡಿಯಾ ಅಭಿಯಾನದ ಅಡಿಯಲ್ಲಿ ಸ್ಥಳೀಯಮಟ್ಟದಲ್ಲಿ ವಯಸ್ಸಾಗಿದ್ದರೂ ಇನ್ನೂ ಸದೃಢರಾಗಿರುವ ವ್ಯಕ್ತಿಯನ್ನು ಗುರುತಿಸಬೇಕು. ಆ ವ್ಯಕ್ತಿಯ ಮೂಲಕ ಫಿಟ್ನೆಸ್ ಬಗ್ಗೆ ಆತನ ಮನೆ ಹಾಗೂ ನೆರೆಮನೆಯ ಮೂಲಕ ಹಂತ ಹಂತವಾಗಿ ಫಿಟ್ನೆಸ್ ಬಗ್ಗೆ ಅರಿವು ಮೂಡಬೇಕು ಎಂದು ಮೋದಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.