ನವದೆಹಲಿ:ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಸಾಕುಪ್ರಾಣಿಗಳನ್ನು ದತ್ತು ಪಡೆಯುವ ಪ್ರಮಾಣ ಹೆಚ್ಚಾಗಿದ್ದು, ಅವುಗಳಿಗೆ ನೀಡುವ ಆಹಾರ ಪದಾರ್ಥಗಳ ಮಾರಾಟ ಕೂಡ ಶೇ 20ರಷ್ಟು ಏರಿಕೆಯಾಗಿದೆ.
ಪೆಡಿಗ್ರೀ, ವಿಸ್ಕಾಸ್, ಐಎಎಂಎಸ್ ಮತ್ತು ಟೆಂಪ್ಟೇಷನ್ನಂತಹ ಜನಪ್ರಿಯ ಬ್ರಾಂಡ್‌ಗಳನ್ನು ಹೊಂದಿರುವ ಮಾರ್ಸ್ ಪೆಟ್‌ಕೇರ್, ನೆಸ್ಲೆ ಒಡೆತನದ ಪ್ಯೂರಿನಾ ಕಂಪನಿಗಳು 2020ರಲ್ಲಿ ಸಾಕುಪ್ರಾಣಿಗಳಿಗೆ ನೀಡುವ ಆಹಾರ ಮಾರಾಟದಲ್ಲಿ ಹೆಚ್ಚಿನ ಲಾಭ ಪಡೆದಿವೆ.
ಈ ಆಹಾರ ಪದಾರ್ಥಗಳು ಮಳಿಗೆಗಳಲ್ಲಿ ಮಾತ್ರವಲ್ಲದೆ ಆನ್ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲೂ ಅಧಿಕ ಪ್ರಮಾಣದಲ್ಲಿ ಮಾರಾಟವಾಗಿವೆ. ಹೀಗಾಗಿ ಭಾರತದಲ್ಲಿ ತಯಾರಕರು ತಮ್ಮ ಉತ್ಪನ್ನದ ಮೇಲೆ ಬಂಡವಾಳವನ್ನು ಹೆಚ್ಚಿಸುತ್ತಿದ್ದಾರೆ ಹಾಗೂ ಹೊಸ ಹೊಸ ಟಿವಿ ಜಾಹೀರಾತುಗಳನ್ನು ನೀಡುತ್ತಾ, ಡಿಜಿಟಲ್ ಅಭಿಯಾನಗಳನ್ನು ಆರಂಭಿಸಿದ್ದಾರೆ.